1
Islamabad:ಭಾರತದ ಅಪರೇಷನ್ ಸಿಂಧೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ ʼಬನ್ಯಾನುನ್ ಮಾರ್ಸೂಸ್ʼ ಅಂದರೆ ಕಾಂಕ್ರೀಟ್ ರಚನೆ ಎಂಬ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿರುವ ಕುರಿತು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಾದ್ಯಂತ ಬಹು ಟಾರ್ಗೆಟ್‌ಗಳನ್ನು ಧ್ವಂಸ ಮಾಡುವಲ್ಲಿ ತೊಡಗಿಸಿಕೊಂಡಿದೆ ಎಂದು ಐಎಸ್‌ಪಿಆರ್ ಹೇಳಿದೆ.
ಕಾಶ್ಮೀರದಲ್ಲಿರುವ ಉಧಂಪುರದಲ್ಲಿರುವ ವಾಯುನೆಲೆಯನ್ನು ನಾಶಪಡಿಸಲಾಗಿದೆ ಎಂದು ಐಎಸ್‌ಪಿಆರ್ ಹೇಳಿದೆ. ಭಾರತದ ಪಂಜಾಬ್ ಪ್ರಾಂತ್ಯದ ಪಠಾಣ್‌ಕೋಟ್ ಜಿಲ್ಲೆಯ ವಾಯುನೆಲೆಯನ್ನೂ ಗುರಿಯಾಗಿಸಿಕೊಂಡಿದೆ ನಾಶಪಡಿಸಲಾಗಿದೆ ಎಂದು ಹೇಳಿದರೂ, ಇದಕ್ಕೆ ಯಾವುದೇ ಸಾಕ್ಷ್ಯ ನೀಡಿಲ್ಲ.
