Gadag: ಮುಖ್ಯಮಂತ್ರಿ ಅವರಿಗೆ ಊರಿನ ಸಮಸ್ಯೆ, ನೀರಾವರಿ, ವಿದ್ಯುತ್ ಇತ್ಯಾದಿ ಸಮಸ್ಯೆಗಳಿದ್ದರೆ ಮನವಿ ಸಲ್ಲಿಸುವುದು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ತನಗೆ ಕನ್ಯೆ ಭಾಗ್ಯ ಕಲ್ಪಿಸುವಂತೆ ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಮೊರೆಯಿಟ್ಟಿದ್ದಾನೆ. ಚುನಾವಣೆ ಹೊತ್ತಲ್ಲಿ ಐದು ಗ್ಯಾರಂಟಿ ಘೋಷಿಸಿ ಜಾರಿಗೆ ತರಲಾಗಿದೆ. ಬಹುಶಃ ಸರ್ಕಾರದಿಂದ ಕನ್ಯೆ ಭಾಗ್ಯ ಕಲ್ಪಿಸಿಕೊಡಬಹುದು ಎಂಬ ಭರವಸೆಯಿಂದ ವಧು ಹುಡುಕಿ ಬೇಸತ್ತ 28 ವರ್ಷದ ಯುವಕ ಮನವಿ ಸಲ್ಲಿಸಿದ್ದಾನೆ.
ಇದು ಗದಗ (gadag) ಜಿಲ್ಲೆ ಮುಂಡರಗಿ (mundaragi) ತಾಲೂಕಿನ ಡಂಬಳ (dambal) ಗ್ರಾಮ ಪಂಚಾಯತಿಯಲ್ಲಿ ಬೆಳಕಿಗೆ ಬಂದ ಘಟನೆಯಾಗಿದ್ದು, ಮುತ್ತು ಹೂಗಾರ (28) ಎಂಬ ಯುವಕ ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿ, ಬೇರೇನೂ ಮಾಡಲು ದಾರಿ ತೋಚದೆ ಗ್ರಾಮ ಪಂಚಾಯತಿ ಪಿಡಿಒಗೆ ಪತ್ರ ಬರೆದಿದ್ದಾನೆ. ಗ್ರಾಮ ಪಂಚಾಯತಿ ಮೂಲಕ ರಾಜ್ಯ ಸರ್ಕಾರಕ್ಕೆ (karnataka government) ತನ್ನ ಅಳಲು ತೋಡಿಕೊಂಡಿದ್ದಾನೆ.
ಮುತ್ತು ಹೂಗಾರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ. ಆದಾಯವೇನು ಕಮ್ಮಿಯಿಲ್ಲ. ತಿಂಗಳಿಗೆ 50 ಸಾವಿರ ರೂಪಾಯಿ ಆದಾಯವಿದೆ. ಸಮಸ್ಯೆ ಏನಂದ್ರೆ ಯುವಕ ಮದುವೆ ವಯಸ್ಸಿಗೆ ಬಂದಿದ್ದಾನೆ. ಆದರೆ, ವಧು ಸಿಗುತ್ತಿಲ್ಲ. ಸಿಕ್ಕರೂ ಸರ್ಕಾರಿ ನೌಕರಿಯಲ್ಲಿದ್ದ ಹುಡುಗ ಬೇಕು ಎಂದು ಕಳಚಿಕೊಳ್ಳುತ್ತಾರೆ. ಹತ್ತೂರು ಅಲೆದರೂ ಹುಡುಗಿ ಸಿಗದೇ ಇದ್ದಾಗ ಬೇಸತ್ತ ನವಯುವಕ ತನಗೆ ಮದುವೆಯಾಗಲು ವಧು ಹುಡುಕಿ ಕೊಡಿ, ಯಾವುದೇ ಜಾತಿಯಾದರೂ ಪರವಾಗಿಲ್ಲ ಎಂದು ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಿದ್ದಾನೆ. ಸದ್ಯ ಯುವಕನ ಮನವಿ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: Hassan : ಎಣ್ಣೆ ಹೊಡೆದು ಯುವಕರ ಹುಚ್ಚಾಟ ; ನಶೆಯಲ್ಲಿ ಸ್ನೇಹಿತನ ಬೆತ್ತಲೆಗೊಳಿಸಿ ರೋಡ್ ಡ್ಯಾನ್ಸ್ ಮಾಡಿದ ಯುವಕರು !
