Free bus for women : ಮಹಿಳೆಯರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರ “ಶಕ್ತಿ ಯೋಜನೆ” ನಾಳೆ (ಜೂ.11) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಎದುರು ಚಾಲನೆ ನೀಡಲಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಯಿಂದಲೇ ಕರ್ನಾಟಕ ಎಲ್ಲ ʻನಾರಿಯರಿಗೆ ಉಚಿತ ಸಾರಿಗೆ ಬಸ್ʼಗಳ ಮೂಲಕ ಸಂಚಾರ ಮಾಡಬಹುದಾಗಿದೆ. ಇನ್ಮುಂದೆ ರಾಜ್ಯದಲ್ಲಿ ಯಾವುದೇ ಭಾಗಗಳಿಗೂ ಉಚಿತವಾಗಿ ಮಹಿಳೆಯರು ಸಂಚಾರ(Free bus for women) ಮಾಡಬಹುದು. ಆದ್ರೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಜನರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಮಹಿಳೆಯರು ಉಚಿತ ಬಸ್‌ನ್ನು ಬಳಕೆ ಮಾಡುವ ಹುಮ್ಮಸ್ಸಿನಲ್ಲಿದ್ದರೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ನಾರಿಯರು ಮಾತ್ರ ಬೇಸರಗೊಂಡಿರುವುದು ನಿಜ. ಇವರು ಪ್ರತಿನಿತ್ಯ ಮೂರು ಕಿಮೀ ನಡೆದುಕೊಂಡು ಹೋಗಿ ಬಸ್ ಹತ್ತಬೇಕು ದುಸ್ಥಿತಿ ಇದೆ. ಈ ಭಾಗದ ಮಹಿಳಾ ಮಣಿಗಳು ಉಚಿತ ಬಸ್ ಪಡೆಯುವಲ್ಲಿ ವಂಚಿತರಾಗಿದ್ದಾರೆ .ಈ ಬಗ್ಗೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕಾಗಿದೆ.
ಇದನ್ನೂ ಓದಿ: KSRTC ಬುಕ್ಕಿಂಗ್ ನಲ್ಲಿ ತೀವ್ರ ಕುಸಿತ, ಖಾಲಿ ಖಾಲಿ ಬಿದ್ದಿರೋ ಸೀಟುಗಳು: ಮಹಿಳೆಯರಿಗೆ ಫ್ರೀ ಬಸ್ ಹಿನ್ನೆಲೆ !
