Home » Tumakur Murder: ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ – ಭಯ ಬೀಳಿಸುತ್ತೆ ಕಾರಣ !!

Tumakur Murder: ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ – ಭಯ ಬೀಳಿಸುತ್ತೆ ಕಾರಣ !!

1 comment
Tumakur Murder

Tumakur Murder: ಪ್ರೀತಿ ಕುರುಡು ಎಂಬಂತೆ ಪ್ರೀತಿಸಿ(Love) ಮದುವೆಯಾಗುವ (Marriage)ಕನಸು ಹೊತ್ತು ಕೊನೆಗೆ ಮನೆಯವರ ವಿರೋಧ ಕಟ್ಟಿಕೊಂಡು ಜಗಳ, ಗಲಾಟೆ ಆಗುವ ಪ್ರಮೇಯಗಳು ಮಾಮೂಲಿ. ಇದರ ಜೊತೆಗೆ ಮನೆಯವರಿಂದ ಪ್ರಣಯ ಜೋಡಿಗಳು ದೂರಾದ ಅದೇ ರೀತಿ ಸಾವಿನ( Death)ಕದ ತಟ್ಟಿದ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಪ್ರೀತಿಸಿ ಮದುವೆಯಾದ ಪತಿಯೇ (Husband) ಪತ್ನಿಯ(Wife)ಕತ್ತು ಸೀಳಿ ಕೊಲೆಗೈದ ಘೋರ ಘಟನೆ ತುಮಕೂರಿನಲ್ಲಿ(Tumakur Murder)ವರದಿಯಾಗಿದೆ.

ಪ್ರೀತಿಸಿ (Love) ಮದುವೆಯಾಗಿದ್ದ ಪತಿಗೆ ಪತ್ನಿಯ ಮೇಲೆ ಅನುಮಾನ ಎಂಬ ಪೆಡಂಭೂತ ಆವರಿಸಿ ಪತಿ ತನ್ನ ಪತ್ನಿಯನ್ನೇ ಕೊಲೆ (Murder) ಮಾಡಿದ ಘಟನೆ ತುಮಕೂರು ತಾಲೂಕಿನ ದೊಡ್ಡಸಾರಂಗಿ ಪಾಳ್ಯದಲ್ಲಿ ನಡೆದಿದೆ. ದಿಲೀಪ್ ಎಂಬಾತ ತನ್ನ ಪತ್ನಿ ಚೈತ್ರಾ ಎಂಬಾಕೆಯ ಮೇಲಿನ ಅನುಮಾನದಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಂಪ್ಯೂಟರ್ ಸೆಂಟರ್ಗೆ ಹೋಗುವಾಗ ಇಬ್ಬರಲ್ಲೂ ಪ್ರೀತಿಯಾಗಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚೈತ್ರಾ ಮತ್ತು ತುಮಕೂರು ತಾಲೂಕಿನ ಮೈದಾಳ ಗ್ರಾಮದ ದಿಲೀಪ್ ನಡುವೆ ಅನುಮಾನ ಎಂಬ ಪೆಡಂಭೂತ ಆವರಿಸಿದೆ.

ಈ ಅನುಮಾನದಿಂದ ಪತ್ನಿಗೆ ದಿನನಿತ್ಯ ಹಿಂಸೆ‌ ಕೊಡುತ್ತಿದ್ದ ಎನ್ನಲಾಗಿದೆ. ಇದು ಸಾಲದೆಂಬಂತೆ ಪತ್ನಿಗೆ ಹೊಡೆದು, ಬಡಿದು ಚಿತ್ರಹಿಂಸೆ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಪತ್ನಿ ಚೈತ್ರಾ ತವರು ಮನೆ ಸೇರಿದ್ದರು. ಆದಾಗ್ಯೂ, ದಿಲೀಪ್ ಸೀದಾ ಪತ್ನಿಯ ತವರು ಮನೆಗೆ ಹೋಗಿ ಪತ್ನಿಗೆ ಕೊರಳಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇದಾದ ಬಳಿಕ ತಪ್ಪಾಗಿದೆ ಕ್ಷಮಿಸಿ ಎಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾನೆ. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಚೈತ್ರಾ ಅವರು ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೂ ಸತತ ಎರಡು ತಿಂಗಳು ನೋವು ಅನುಭವಿಸಿ ಚೈತ್ರಾ ತವರು ಮನೆಯಲ್ಲಿ ಸಾವಿನ ಕದ ತಟ್ಟಿದ್ದು, ಮಗಳ ಸಾವಿನಿಂದ ನೊಂದ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಘಟನೆ ಕುರಿತು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಚೈತ್ರಾ ಮನೆಯವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bigg Boss-Sangeetha: ಬಿಗ್ ಬಾಸ್ ಒಳಗಿರೋ ಸಂಗೀತಾಗೆ ದೊಡ್ಡ ಆಘಾತ- ಮನೆ ಹೊರಗೆ ಕಾದಿದೆ ಬಿಗ್ ಶಾಕ್

You may also like

Leave a Comment