Home » Fish Delivery: ಬೆಂಗಳೂರಿನ ಜನತೆಗೆ ಭರ್ಜರಿ ಗುಡ್ ನ್ಯೂಸ್- ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಈ ಹೊಸ ಸೇವೆ

Fish Delivery: ಬೆಂಗಳೂರಿನ ಜನತೆಗೆ ಭರ್ಜರಿ ಗುಡ್ ನ್ಯೂಸ್- ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಈ ಹೊಸ ಸೇವೆ

1 comment

Fish Delivery : ರಾಜ್ಯ ಸರ್ಕಾರ ಮೀನುಗಾರರ ಸಮಸ್ಯೆಗಳಿಗೆ (Problems of fishermen) ಪರಿಹಾರ ನೀಡುವ ನಿಟ್ಟಿನಲ್ಲಿ ಆರ್ಥಿಕವಾಗಿ ಬೆಂಬಲ ನೀಡುವ ಸಲುವಾಗಿ ಮಹತ್ವದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ.

ವಿಶ್ವ ಮೀನುಗಾರಿಕೆ ದಿನಾಚರಣೆ (World Fisheries Day) ದಿನದ ನಿಮಿತ್ತ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ (Matsyavahini eco friendly three wheeler) ಸೇವೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಹೀಗಾಗಿ , ಇನ್ನೂ ಮುಂದೆ ಬೆಂಗಳೂರಿನ ಮನೆ ಮನೆಗೆ ಈ ಸೇವೆ ತಲುಪಲಿದೆ. ಹೌದು!!ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಮೂಲಕ ತಾಜಾ ಮೀನುಗಳು (Fish Delivery) ಇನ್ನು ಬೆಂಗಳೂರಿನ ಮನೆ ಮನೆ ತಲುಪಲಿವೆ.

Fish Delivery

ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಜೊತೆಗೆ ಮೀನುಗಾರ ಕುಟುಂಬದವರಿಗೆ ನಿಶ್ಚಿತ ಆದಾಯದ ಮೂಲವಾಗಲಿದೆ ಎಂಬ ದೆಸೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಸದ್ಯಕ್ಕೆ, ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮೀನುಗಾರಿಕಾ ಇಲಾಖೆ 150 ವಾಹನ ಸೇವೆಯನ್ನು ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಯ ಅನುಸಾರ ಜಿಲ್ಲಾ ಕೇಂದ್ರಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಒಳಗೊಂಡಿದೆ.

ಬೆಂಗಳೂರು ನಗರದಲ್ಲಿ 150 ಮತ್ಸ್ಯವಾಹಿನಿ ವಾಹನಗಳು ಸಂಚರಿಸಲಿದ್ದು, ಬೆಳಗ್ಗೆ ತಾಜಾ ಮೀನು ಮಾರಾಟವನ್ನು ಮಾಡಲಾಗುತ್ತದೆ. ಅದೇ ರೀತಿ ,ಸಂಜೆ ವೇಳೆಗೆ ಮೀನು ಖಾದ್ಯಗಳ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಾಹನ ಭದ್ರತಾ ಠೇವಣಿ 2 ಲಕ್ಷ ರೂ. ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಜಿಲ್ಲೆಗಳಿಗೆ ಕೂಡ 150 ವಾಹನಗಳನ್ನು ಸರ್ಕಾರದಿಂದ ವಿತರಣೆ ಮಾಡುವ ಯೋಜನೆ ರೂಪಿಸಿದೆ.

ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ಅವಧಿ ವಿಸ್ತರಣೆ – ಕಾದು ಕಾದು ಸುಸ್ತಾದ ಸರ್ಕಾರಿ ನೌಕರರಿಂದ ಮಹತ್ವದ ನಿರ್ಧಾರ !!

You may also like

Leave a Comment