Home » Old Age Pension:ವೃದ್ಧಾಪ್ಯ ವೇತನದಲ್ಲಿ ಭಾರೀ ಹೆಚ್ಚಳ – ಸಿಎಂ ಸಿದ್ದರಾಮಯ್ಯ ಘೋಷಣೆ

Old Age Pension:ವೃದ್ಧಾಪ್ಯ ವೇತನದಲ್ಲಿ ಭಾರೀ ಹೆಚ್ಚಳ – ಸಿಎಂ ಸಿದ್ದರಾಮಯ್ಯ ಘೋಷಣೆ

1 comment
Old Age Pension

Old Age Pension: ರಾಜ್ಯದಲ್ಲಿ ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಕ್ಕೆ ಭಾರಿ ಬೇಡಿಕೆಯಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ಮಾಹಿತಿ ನೀಡಿದ್ದಾರೆ. ಮುಂದಿನ 2024-25ನೇ ಸಾಲಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನವನ್ನು(Old Age Pension)ಹೆಚ್ಚಳ ಮಾಡಲಾಗುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಕರ್ನಾಟಕದ ಸುಮಾರು 49 ಲಕ್ಷ ವೃದ್ಧರಿಗೆ ಸರ್ಕಾರದಿಂದ ಮಾಸಿಕ 1,200 ರೂ. ವೃದ್ಧಾಪ್ಯ ವೇತನವನ್ನು ಒದಗಿಸಲಾಗುತ್ತಿದೆ. ಇದನ್ನು 2,000 ರೂ.ವರೆಗೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ಮನವಿ ಸಲ್ಲಿಸಿದ್ದಾರೆ.

ಈಗ 49 ಲಕ್ಷ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಮಾಸಿಕ ತಲಾ 1,200 ರೂ. ಪಿಂಚಣಿಯನ್ನು ನೀಡಲಾಗುತ್ತಿದೆ. ಆದರೆ, ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದು, ಈ ಹಣ ಜೀವನ ನಿರ್ವಹಣೆಗೆ ಕಷ್ಟವಾಗುವ ಹಿನ್ನೆಲೆ ಮಾಸಿಕ 1200 ರೂ. ಪಿಂಚಣಿಯನ್ನ 2 ಸಾವಿರಕ್ಕೆ ಏರಿಕೆ ಮಾಡಲು ಮನವಿ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವೆ ಹೆಬ್ಬಾಳ್ಕರ್‌ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ಬಜೆಟ್ ನಲ್ಲಿ ವೃದ್ಧಾಪ್ಯದ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

ಇದನ್ನೂ ಓದಿ: Karnataka: ರಾಜ್ಯದ ಎಲ್ಲಾ ಉಪನ್ಯಾಸಕರಿಗೆ ಶಾಕ್ ಕೊಟ್ಟ ಸರ್ಕಾರ- ಇದೊಂದು ತಪ್ಪು ಮಾಡಿದ್ರೆ ನಿಮ್ಮ ಕೆಲಸಕ್ಕೇ ಬರುತ್ತೆ ಕುತ್ತು

You may also like

Leave a Comment