Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ.
ಸದ್ಯ ಸರ್ಕಾರ ಜನರಿಗೆ ಬಿಗ್ ಶಾಕ್ ನೀಡಿದ್ದು, ಆಹಾರ ಇಲಾಖೆಯ ಪರಿಶೀಲನೆಯ ಆಧಾರದ ಮೇರೆಗೆ ಸುಮಾರು 3 ಲಕ್ಷ ಜನರ ಪಡಿತರ ಚೀಟಿ ಅಮಾನತು ಮಾಡಲು ನಿರ್ಧರಿಸಲಾಗಿದೆ. ಸುಮಾರು 2.96 ಲಕ್ಷ ಹೊಸದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಸಾಕಷ್ಟು ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಇವರ ರೇಷನ್ ಕಾರ್ಡ್ ರದ್ದು ಪಡಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ನ್ನು ಕೂಡ ರದ್ದು ಮಾಡಲು ಚಿಂತನೆ ನಡೆಸಲಾಗಿದೆ.
6 ತಿಂಗಳಿನಿಂದ ಪಡಿತರ ಪಡೆಯದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಒಟ್ಟು 3.26 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಎಂದು ವರದಿಯಾಗಿದೆ. ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ಚಾಲನೆಯಲ್ಲಿದೆಯಾ ?! ಇದನ್ನು ಚೆಕ್ ಮಾಡೋದು ಹೇಗೆ?! ಇಲ್ಲಿದೆ ನೋಡಿ ಮಾಹಿತಿ!!!.
ರೇಷನ್ ಕಾರ್ಡ್ ಚಾಲನೆಯಲ್ಲಿದೆಯಾ?! ಚೆಕ್ ಮಾಡಿ:-
ಅಧಿಕೃತ ವೆಬ್ಸೈಟ್ ಗೆ nfsa.gov.in/Default.aspx ಗೆ ಭೇಟಿ ನೀಡಿ. ನಂತರ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು. ನೀವು ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ನೀವು ನಿಮ್ಮ ಜಿಲ್ಲೆಯನ್ನು, ನಿಮ್ಮ ಬ್ಲಾಕ್ ಅನ್ನು ಮತ್ತು ನಿಮ್ಮ ಪಂಚಾಯತ್ ಅನ್ನು ಆಯ್ಕೆ ಮಾಡಬೇಕು.
ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಹೇಳಬೇಕು. ನಂತರ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ. ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಹುಡುಕಬೇಕು.
ನಂತರ ಹುಡುಕಿದ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಎಂದರ್ಥ. ಆದರೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ.
ಇದನ್ನೂ ಓದಿ: D V Sadananda gouda: ಮಾಜಿ ಸಿಎಂ ಸದಾನಂದಗೌಡಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!
