Home » Chaitra kundapura: ಉಡುಪಿ-ಚಿಕ್ಕಮಗಳೂರಿನ BJP ಲೋಕಸಭಾ ಅಭ್ಯರ್ಥಿ ನಾನೇ- ಚೈತ್ರಾ ಕುಂದಾಪುರ !!

Chaitra kundapura: ಉಡುಪಿ-ಚಿಕ್ಕಮಗಳೂರಿನ BJP ಲೋಕಸಭಾ ಅಭ್ಯರ್ಥಿ ನಾನೇ- ಚೈತ್ರಾ ಕುಂದಾಪುರ !!

2 comments
Chaitra kundapura

Chaitra kundapura: ರಾಜ್ಯದಲ್ಲಿ ಭಾರೀ ಸದ್ದುಮಾಡ್ತಿರೋ ಚೈತ್ರಾ ಕುಂದಾಪುರ(Chaitra kundapura)ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅಲ್ಲದೆ ಆಕೆಯ ಕೆಲವು ಬಣ್ಣದ ರೂಪಗಳೂ ಬಯಲಾಗುತ್ತಿವೆ. ಅಂತೆಯೇ ಇದೀಗ ಈ ಕತರ್ನಾಕ್ ಪೈರ್ ಲೇಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ತಾನೇ ಎಂಬುದಾಗಿ ಬಿಂಬಿಸಿಕೊಂಡಿದ್ದಾಳೆ.

ಹೌದು, ಕೇಂದ್ರ ವಿತ್ತ ಸಚಿವೆ ನೀಡಿದ ಡೇರಿಂಗ್ ಗರ್ಲ್​ ಎಂಬ ಪಟ್ಟವನ್ನೇ ದುರುಪಯೋಗ ಮಾಡಿ ಖ್ಯಾತಿ ಗಳಿಸಿದ್ದ ಚೈತ್ರಾ, ರಾಜಕೀಯ ನವರಂಗೀಯ ಆಟಗಳನ್ನು ಆಡಿದ್ದಾರೆ. ಇದರ ಮೂಲಕ ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಪ್ರಭಾವಿಗಳನ್ನ ವಂಚನೆ ಜಾಲಕ್ಕೆ ಬೀಳಿಸಲು ಇಂತಹ ಕೃತ್ಯ ನಡೆದ ಗಂಭೀರ ಆರೋಪ ಇದಾಗಿದೆ.

ತನಗೆ ಕೇಂದ್ರದ ಪ್ರಭಾವಿ ಸಚಿವರ ಪರಿಚಯವಿರುವುದಾಗಿ ಹೇಳಿಕೊಂಡಿದ್ದ ಚೈತ್ರಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮುಂದಿನ ಚುನಾವಣೆಗೆ ಟಿಕೆಟ್ ಇಲ್ಲ. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದರು ಎಂದು ತಿಳಿದುಬಂದಿದೆ. ಗೋವಿಂದ ಪೂಜಾರಿಗೂ ಹೀಗೆಯೇ ನಂಬಿಸಿದ್ದ ಚೈತ್ರಾ ಮತ್ತು ಸಹಚರರು, ತನ್ನ ಬಿಲ್ಡಪ್ ಹೆಚ್ಚಿಸಿಕೊಳ್ಳಲು ಜೊತೆಗೆ ಇತರ ಯುವಕರನ್ನ ಇರಿಸಿಕೊಂಡಿದ್ದರು. ತನಗೆ ಲೋಕಸಭೆ ಟಿಕೆಟ್ ಎಂದು ಹಲವರನ್ನು ನಂಬಿಸಿದ್ದ ಚೈತ್ರಾಳ ಮಾತನ್ನು ನಂಬಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಹಣ ನೀಡಿದ್ದರು.

ಇಷ್ಟೇ ಅಲ್ಲದೆ ತಾನು ಹಿಂದುತ್ವದ ಫೈರ್ ಬ್ರ್ಯಾಂಡ್ ಎಂಬಂತೆ ಚೈತ್ರಾ ಬಿಂಬಿಸಿದ್ದರೂ, ಕರಾವಳಿ ಭಾಗದಲ್ಲಿ ನೆಲೆ ಸಿಗದ ಕಾರಣ ಉತ್ತರ ಕರ್ನಾಟಕ ಭಾಗದ ಕಡೆ ಗಮನವನ್ನು ಹರಿಸಿದ್ದಳಂತೆ ಆರೋಪಿ. ಇದೇ ಕಾರಣಕ್ಕೆ ಉತ್ತರ ಕರ್ನಾಟಕದ ಹಲವೆಡೆ ಭಾರಿ ಬೇಡಿಕೆಯ ಭಾಷಣಗಾರ್ತಿ ಆಗಿದ್ದರು. ಆ ಭಾಗದ ಜನರಿಂದ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ರು ಈ ಪ್ರಕರಣದ ಆರೋಪಿ. ಇನ್ನು ಹಲವು ಹಿಂದೂ ಪರ & ಬಿಜೆಪಿ ಪರ ಸಭೆಗಳಲ್ಲಿ ಭರ್ಜರಿ ಪ್ರಚಾರ ಕೂಡ ನಡೆದಿತ್ತು.

ಕರಾವಳಿಯಲ್ಲಿ ಈಕೆ ಏಕೆ ಮೆರೆಯಲಾಗಲಿಲ್ಲ?
ಬಿಜೆಪಿ ಸರಕಾರದ ಅವಧಿಯಲ್ಲಿ 2021 ರ ಅಕ್ಟೋಬರ್ 5 ರಂದು ಸುರತ್ಕಲ್​ನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಚೈತ್ರಾ, ಕೋಮು ಪ್ರಚೋದನೆ ಹಾಗೂ ಕೋಟಿ ಚೆನ್ನಯ್ಯರಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅಂದು ಬಜರಂಗದಳ ವತಿಯಿಂದ ನಡೆದಿದ್ದ ಹಿಂದೂ ಜನಜಾಗೃತಿ ಸಭೆ ನಂತರ ಚೈತ್ರಾ ಅವರು ಕರಾವಳಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಇದನ್ನೂ ಓದಿ: Chandrayana-1: ಚಂದ್ರನ ಕುರಿತು ಇಸ್ರೋ ವಿಜ್ಞಾನಿಗಳಿಗೆ ಸಿಕ್ತು ಮತ್ತೊಂದು ಅಚ್ಚರಿಯ ಗುಡ್ ನ್ಯೂಸ್!! ಆದ್ರೆ ಈ ಸಲ ಮಾಹಿತಿ ಕಳಿಸಿದ್ದು ವಿಕ್ರಮ್, ಪ್ರಗ್ಯಾನ್ ಯಾರೂ ಅಲ್ಲ, ಮತ್ಯಾರು ?

You may also like

Leave a Comment