Home » Kerala Crime: ಕೊಡಲಿಯಿಂದ ತನ್ನ ಆರು ವರ್ಷದ ಮಗಳ ಬರ್ಬರ ಹತ್ಯೆ ಮಾಡಿದ ತಂದೆ!

Kerala Crime: ಕೊಡಲಿಯಿಂದ ತನ್ನ ಆರು ವರ್ಷದ ಮಗಳ ಬರ್ಬರ ಹತ್ಯೆ ಮಾಡಿದ ತಂದೆ!

0 comments
Kerala crime

Kerala crime: ಇದೊಂದು ಭೀಭತ್ಸ್ಯ ಘಟನೆಯೆಂದೇ ಹೇಳಬಹುದು. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರಣ ಖಿನ್ನತೆಗೆ ಜಾರಿದ್ದ ವ್ಯಕ್ತಿ ತನ್ನ ಆರು ವರ್ಷದ ಮಗಳನ್ನೇ ಬರ್ಬರವಾಗಿ ಹತ್ಯೆ  ಮಾಡಿರುವ ಘಟನೆಯೊಂದು ಕೇರಳದ(Kerala crime) ಆಲಪ್ಪುಳದಲ್ಲಿ ನಡೆದಿದೆ. ನಾಲ್ಕು ವರ್ಷದ ಹಿಂದೆ ಈತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಖಿನ್ನತೆಗೊಳಗಾಗಿದ್ದ ಈತ, ಅನಂತರ ಚಿಕಿತ್ಸೆಗೆ ಒಳಪಟ್ಟಿದ್ದ.

ಕೇರಳದ ಆಲಪ್ಪುಳದ ಪುನ್ನಮೂಡು, ಮಾವೇಲಿಕ್ಕರ ಮೂಲದ ಶ್ರೀ ಮಹೇಶ್‌ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಆರೋಪಿಸಲಾಗಿದೆ. ತನ್ನದೇ ಕರುಳಕುಡಿಯನ್ನು ಕೈ ಕೊಡಲಿಯಿಂದ ಕಡಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಸುಮಾರು ಎಂಟು ಗಂಟೆಗೆ ಮಗಳು ನಕ್ಷತ್ರಳ ಕಿರುಚಾಟ ಕೇಳಿ ಮನೆಗೆ ಓಡಿ ಬಂದ ತಾಯಿ ಮೇಲೆ ಸಹ ಹಲ್ಲೆ ನಡೆಸಲಾಗಿದೆ.

ಪತ್ನಿಯ ಸಾವಿನಿಂದ ಖಿನ್ನತೆಗೊಳಗಾಗಿದ್ದ ವ್ಯಕ್ತಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಈತನ ಮನೆಯ ಪಕ್ಕದಲ್ಲಿ ಮಗಳೊಂದಿಗೆ ವಾಸವಿದ್ದ ಶ್ರೀಮಹೇಶ್‌ ಅವರ ತಾಯಿ ಸುನಂದ (62) ಅವರಿಗೂ ಹಲ್ಲೆ ಮಾಡಿದ್ದು, ಅವರ ತಲೆ ಕುತ್ತಿಗೆಗೆ ಗಾಯವಾಗಿದೆ. ಈ ಕೃತ್ಯಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈತ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದು, ನಂತರ ಊರಿಗೆ ಬಂದಿದ್ದ ಎನ್ನಲಾಗಿದೆ. ಈ ಮಧ್ಯೆ ಈತನ ತಂದೆ ಕೂಡಾ ತೀರಿಹೋಗಿದ್ದರೆನ್ನಲಾಗಿದೆ. ಈತ ಇನ್ನೊಂದು ಮದುವೆಯಾಗಲು ಪ್ರಯತ್ನ ಮಾಡುತ್ತಿದ್ದು, ಆದರೆ ಈತನ ಚಿಕಿತ್ಸೆ ತೆಗೆದುಕೊಳ್ಳುವ ವಿಷಯ ತಿಳಿದ  ಹುಡುಗಿ ಮನೆಯವರು ಮದುವೆಗೆ ಒಪ್ಪಲಿಲ್ಲ ಎನ್ನಲಾಗಿದೆ. ಅನಂತರ ಆತ ಈ ದುಷ್ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Bank Job: ಗ್ರಾಮೀಣ ಬ್ಯಾಂಕುಗಳಲ್ಲಿ ಭರ್ಜರಿ ಉದ್ಯೋಗವಕಾಶ, 800 ಹುದ್ದೆಗಳ ಭರ್ತಿ ಕಾರ್ಯ ಶುರು!

You may also like

Leave a Comment