Kerala Highcourt: ಮಹಿಳಾ ಹಕ್ಕುಗಳ ಕಾರ್ಯಕರ್ತೆ ರೆಹಾನಾ ಪಾತಿಮಾ ಅವರು ತನ್ನ ಮಗ ಹಾಗೂ ಮಗಳ ಕೈಯಿಂದ ತಮ್ಮ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದರಿಂದಾಗಿ ಅವರ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಹೈಕೋರ್ಟು ನೀಡಿದ ತೀರ್ಪೇನು ಗೊತ್ತಾ?
ತಾಯಿಯು ತನ್ನ ದೇಹವನ್ನು ಕ್ಯಾನ್ವಾಸ್‌ನಂತೆ ತನ್ನ ಮಕ್ಕಳಿಗೆ ಪೇಟಿಂಗ್ ಮಾಡಲು ಅನುಮತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮಹಿಳೆ ನಗ್ನವಾಗಿರುವುದು ಅಶ್ಲೀಲವಲ್ಲ. ಮಹಿಳೆಯರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿದೆ ಎಂದು ಕೇರಳ ಹೈಕೋರ್ಟ್ (Kerala Highcourt) ತೀರ್ಪು ನೀಡಿದ್ದು, ಪೊಕ್ಸೊ ಪ್ರಕರಣವನ್ನು ಕೇರಳದ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮಕ್ಕಳಿಗೆ ಚಿತ್ರ ಬಿಡಿಸಲು ಆಕೆಯ ದೇಹವನ್ನು ಕ್ಯಾನ್ವಾಸ್ ಆಗಿ ಬಳಸಲಾಗಿದೆ. ತನ್ನ ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮೂಲಭೂತವಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯವಾಗಿದೆ ಎಂದು ಆಕೆಯ ಪರವಾಗಿ ವಕೀಲರು ವಾದ ಮಂಡಿಸಿದರು. ನಗ್ನತೆಯನ್ನು ಅಶ್ಲೀಲತೆ ಅಥವಾ ಅನೈತಿಕತೆ ಎಂದು ವಿಂಗಡಿಸಬಾರದು. ನಗ್ನತೆಯನ್ನು ಲೈಂಗಿಕತೆಗೆ ಜೋಡಿಸಬಾರದು. ನಗ್ನತೆ ಮತ್ತು ಅಶ್ಲೀಲತೆ ಯಾವಾಗಲೂ ಒಂದೇ ಅಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
