Home » Kodagu: ಹುಡುಗಿಯರ ಹಾಸ್ಟೆಲ್ ಎದುರಲ್ಲೇ ಯುವಕನೋರ್ವನ ಹಸ್ತಮೈಥುನ! ವೀಡಿಯೋ ವೈರಲ್!

Kodagu: ಹುಡುಗಿಯರ ಹಾಸ್ಟೆಲ್ ಎದುರಲ್ಲೇ ಯುವಕನೋರ್ವನ ಹಸ್ತಮೈಥುನ! ವೀಡಿಯೋ ವೈರಲ್!

1 comment
Kodagu

Kodagu: ಕೊಡಗಿನ (Kodagu) ಸರ್ಕಾರಿ ಮೆಡಿಕಲ್ ಕಾಲೇಜಿಗೆ (Medical College) ವಿಕೃತ ಕಾಮಿಗಳು, ಪುಂಡರು, ಪೋಲಿಗಳ ಕಿರುಕುಳದಿಂದ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ.

ಮಡಿಕೇರಿ ನಗರದ (Madikeri) ಹೊರವಲಯದ ಕರ್ಣಂಗೇರಿಯಲ್ಲಿರುವ ಸರ್ಕಾರಿ ಮೆಡಿಕಲ್ ‌ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಹಾಸ್ಟೆಲ್ (Ladies Hostel ) ಹತ್ತಿರ ಪುಂಡರ ಹಾವಳಿ ಹೆಚ್ಚಾಗುತ್ತಿರುವ ಕುರಿತು ವಿದ್ಯಾರ್ಥಿಗಳು (Students) ಆರೋಪ ಮಾಡಿದ್ದು, ರಸ್ತೆಯಲ್ಲಿ ಸಂಚರಿಸುವ ವೇಳೆ ಬಟ್ಟೆ ಬಿಚ್ಚಿ ಕಿರುಕುಳ ನೀಡುತ್ತಿರುವ ಕುರಿತು ಆರೋಪ ಕೇಳಿ ಬಂದಿದೆ.

ಮೆಡಿಕಲ್ ಕಾಲೇಜಿಗೆ ಗೇಟ್ ಇಲ್ಲದೆ ಇರುವ ಹಿನ್ನೆಲೆ ರೋಡ್ ರೋಮಿಯೋ ರೀತಿ ಅಡ್ಡಾಡುವ ಪುಂಡರಿಗೆ ಓಡಾಡಲು ಸುಲಭವಾಗಿದೆ. ಅಷ್ಟೆ ಅಲ್ಲದೇ, ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಸೂಕ್ತ ಭದ್ರತೆ (Security) ಇಲ್ಲದಿರುವುದರಿಂದ ನಿರ್ಭೀತಿಯಿಂದ ಪುಂಡರು ಹಾವಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮೆಡಿಕಲ್ ಕಾಲೇಜಿನಿಂದ(Medical College)ಹೊರಗೆ ಬರುವ ಸಂದರ್ಭ ಇರುವ ನಿರ್ಜನ ರಸ್ತೆಯಲ್ಲೂ ಕಾಲೇಜು ವಿದ್ಯಾರ್ಥಿಗಳನ್ನು(Students )ತಡೆದು ಪುಂಡರು ಕಿರುಕುಳ ನೀಡುತ್ತಾರೆ. ಒಂದೆಡೆ ಹಾಸ್ಟೆಲ್‌ ಸುತ್ತ ಅಡ್ಡಾಡುತ್ತಾ ಕಿರಿಕ್ ಮಾಡಿದರೆ ಮತ್ತೊಂದೆಡೆ ರಸ್ತೆಯಲ್ಲೂ ಕೂಡ ವಿದ್ಯಾರ್ಥಿಗಳು ಪುಂಡರ ಹಾವಳಿಯಿಂದ ಭಯದಿಂದಲೇ ಓಡಾಡುವ ಸ್ಥಿತಿ ಎದುರಾಗಿದೆ. ಇದರಿಂದ ಬೇಸತ್ತು ಹೋಗಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆಟೋ, ಬೈಕ್ ಇನ್ನಿತರ ವಾಹನಗಳಲ್ಲಿ ಬರುವ ಪೋಲಿ ಹುಡುಗರು, ಹಾಸ್ಟೆಲ್ ಹುಡುಗಿಯರ ಎದುರು ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಮಾಡುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ಸಂದರ್ಭ ಕಾಲೇಜು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲಾಗುತ್ತದೆ ಎನ್ನಲಾಗಿದೆ. ಇದರ ನಡುವೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಜಾಣ ಕುರುಡು ತಾಳುತ್ತ ಮೌನ ವಹಿಸಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯರ ಹಾಸ್ಟೆಲ್( ladies hostel)ಬಳಿ ಏನೇ ಮಾಡಿದರು ಪ್ರಶ್ನೆ ಮಾಡುವವರು ಇಲ್ಲದೆ ಇರುವ ಹಿನ್ನೆಲೆ ಪುಂಡರಿಗೆ ಭಯವೇ ಇಲ್ಲದಂತಾಗಿದೆ. ಈ ಹಿಂದೆ ಹಾಸ್ಟೆಲ್ ಬಳಿ ಬಂದು ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೋ ವೈರಲ್( Video Viral)ಆಗಿದ್ದು, ಸುಮಾರು 40 ಸೆಕೆಂಡ್‌ಗಳ‌ ಕಾಲ ಹಾಸ್ಟೆಲ್ ಮುಂಭಾಗದಲ್ಲಿಯೇ ನಿಂತಿದ್ದ ವ್ಯಕ್ತಿ ಹಾಸ್ಟೆಲ್ ಸಮೀಪದಲ್ಲೇ ಅತ್ತ ಇತ್ತ ಅಲ್ಲೇ ಸುತ್ತಾಡಿರುವ ದೃಶ್ಯಗಳು ಹಾಸ್ಟೆಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ರೀತಿಯ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆ ಭಯಭೀತರಾಗಿರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ಗೇಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಜೊತೆಗೆ ಅನಧಿಕೃತವಾಗಿ ಬರುವವರ ತಡೆಗೆ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದ್ದಾರೆ.ಕನಿಷ್ಠ ಕಾಲೇಜು ಆಸು ಪಾಸಿನಲ್ಲಿ ಅನಾಮಿಕರ ಪ್ರವೇಶ ತಡೆಯುವಂತೆ ವಿದ್ಯಾರ್ಥಿಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಹಾಸ್ಟೆಲ್‌ನಲ್ಲಿ ,ಜಿಲ್ಲಾಸ್ಪತ್ರೆಗೆ ಹೋಗುವಲ್ಲಿ ನಿರ್ಭಿತಿಯಿಂದ ಹೋಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ನಮಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಆರೋಪಿಗಳ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳುವವರೆಗೆ ಕಾಲೇಜಿಗೆ ಹೋಗುವುದಿಲ್ಲ ಎಂದು ಇಂದು ತರಗತಿಗೆ ಬಹಿಷ್ಕಾರ ಹಾಕಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Shakti Yojana: ಶಕ್ತಿ ಯೋಜನೆಯ ಶೂನ್ಯ ಟಿಕೇಟ್ ವೆಚ್ಚ ನಾಲ್ಕು ನಿಗಮಗಳಿಗೆ ಬಿಡುಗಡೆ ಮಾಡಿ ಆದೇಶ!

You may also like

Leave a Comment