Home » Baby Girl: ನಿಮ್ಮ ಮನೆಯಲ್ಲಿ ಮಗು ಜನಿಸಿದರೆ ಕೇಂದ್ರ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ!

Baby Girl: ನಿಮ್ಮ ಮನೆಯಲ್ಲಿ ಮಗು ಜನಿಸಿದರೆ ಕೇಂದ್ರ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ!

0 comments
Baby girl

Baby Girl: ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ (Baby Girl) ಸಂಖ್ಯೆ ಕಡಿಮೆಯಾಗುತ್ತಿರುವುದು ನಮಗೆ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ.

ಹೌದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಣ್ಣು ಮಕ್ಕಳು ಹುಟ್ಟುವಂತೆ ಪ್ರೋತ್ಸಾಹಿಸುತ್ತಿದ್ದು,
ಇತ್ತೀಚೆಗಷ್ಟೇ ಕೇಂದ್ರ ಅಂತಹ ಒಂದು ಕೊಡುಗೆಯನ್ನು ಪ್ರಕಟಿಸಿದೆ. ಅದರ ಪ್ರಕಾರ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ಅರ್ಹರಿಗೆ ರೂ.6 ಸಾವಿರ ಧನಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಆ ಕೊಡುಗೆಯನ್ನು ನೀಡುತ್ತಿದೆ.

ಈಗಾಗಲೇ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ಅಡಿಯಲ್ಲಿ ಕೇಂದ್ರವು ಗಂಡು ಅಥವಾ ಹೆಣ್ಣು ಮಗುವಿನ ಮೊದಲ ಹೆರಿಗೆಗೆ ಮೂರು ಹಂತಗಳಲ್ಲಿ ರೂ.5,000 ನೀಡುತ್ತಿದೆ.

ಇತ್ತೀಚೆಗೆ ಎರಡನೇ ಹೆರಿಗೆಯಲ್ಲಿ ಹೆಣ್ಣುಮಗು ಜನಿಸಿದರೆ ತಾಯಿಗೆ 6 ಸಾವಿರ ರೂ.ನೀಡುವುದಾಗಿ ಕೇಂದ್ರ ಹೇಳಿತ್ತು. ಅವಳಿ ಮಕ್ಕಳು ಜನಿಸಿದರೆ, ಅವಳಿ ಮಕ್ಕಳಲ್ಲಿ ಒಬ್ಬರು ಹೆಣ್ಣು ಮಗುವಾಗಿದ್ದರೂ ಸಹ ಈ ಯೋಜನೆ ಅನ್ವಯಿಸುತ್ತದೆ.

ಆದರೆ ಅವಳಿ ಮಕ್ಕಳಿಬ್ಬರೂ ಹೆಣ್ಣು ಮಕ್ಕಳಾದರೆ ತಲಾ ರೂ.6 ಸಾವಿರ ಕೇವಲ ಒಂದು ಹೆಣ್ಣು ಮಗುವಿಗೆ ಮಾತ್ರ ಕೇವಲ ರೂ.6 ಸಾವಿರ ನೀಡಲಾಗುವುದು

ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ: Teacher Job: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ; ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!

You may also like

Leave a Comment