Home » Chikkaballapur: ಚಿಕ್ಕಬಳ್ಳಾಪುರ ಘೋರ ದುರಂತ : ಶ್ರೀನಿವಾಸ ಸಾಗರ ಜಲಾಶಯಕ್ಕೆ ಈಜಲು ತೆರಳಿದ ಯುವಕ ನೀರು ಪಾಲು

Chikkaballapur: ಚಿಕ್ಕಬಳ್ಳಾಪುರ ಘೋರ ದುರಂತ : ಶ್ರೀನಿವಾಸ ಸಾಗರ ಜಲಾಶಯಕ್ಕೆ ಈಜಲು ತೆರಳಿದ ಯುವಕ ನೀರು ಪಾಲು

0 comments

Chikkaballapur: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈಜಲು ತೆರಳಿ ಯುವಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮೊಹಮ್ಮದ್ ಯಾಸೀನ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ವೀಕೆಂಡ್‌ ರಜೆ ನಿಮಿತ್ತ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ಪಟ್ಟ ಮೊಹಮ್ಮದ್ ಯಾಸೀನ್ ಬೆಂಗಳೂರಿನ ಶ್ಯಾಂಪುರ ನಿವಾಸಿ ಎಂದು ತಿಳಿದು ಬಂದಿದೆ. ಘಟನೆ ಸಂಬಂಧಿಸಿ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹೆಣ್ಮಕ್ಳೆ ಸ್ಟ್ರಾಂಗು ಗುರು.. ! ಡ್ರೈವರ್​ ಸೀಟ್​ ಮೂಲಕ ಬಸ್ ಹತ್ತಿದ ಲೇಡಿಸ್

You may also like

Leave a Comment