Anna bhagya: ಕಾಂಗ್ರೆಸ್ ಸರ್ಕಾರದ(Congress Government) ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಅನ್ನ ಭಾಗ್ಯ'(Anna bhagya) ಯೋಜನೆಗೆ ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದು, ರಾಜ್ಯದ್ಯಂತ ಫಲಾನುಭವಿಗಳ ಖಾತೆಗೆ ಸರ್ಕಾರ ಇಂದು ಸಂಜೆಯಿಂದ ಹಣ ಜಮೆ ಮಾಡಲಿದೆ.
ಹೌದು, ಅನ್ನ ಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್(BPL) ಕಾರ್ಡುದಾರರಿಗೆ ಜು. 10ರಿಂದ ಹಣ ಪಾವತಿಸಲಾಗುತ್ತದೆ ಎಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಅಂತೆಯೇ ಇದೀಗ ಆ ಯೋಜನೆಗೆ ಮುಹೂರ್ತ ಫಿಕ್ಸ್ ಆಗಿದ್ದು ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಅದರಂತೆ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿಯ ಹಣವನ್ನು ನೇರವಾಗಿ ಬ್ಯಾಂಕ್(Bank) ಗೇ ವರ್ಗಾವಣೆ ಮಾಡುವ ಪ್ರಕ್ರಿಯೆ ಇಂದು ಸಂಜೆಯಿಂದ ಪ್ರಾರಂಭವಾಗಲಿದೆ.
ಅಂದಹಾಗೆ ಪ್ರತಿ ಕಿಲೋಗೆ 34 ರೂಪಾಯೊಯಂತೆ ಫಲಾನುಭವಿಗಳ ಖಾತೆಗೆ ನಗದು ಜಮಾ ಮಾಡಲಾಗುತ್ತದೆ. 15 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ಜುಲೈ 10 ರಂದು ಅಂದರೆ ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(DK Shivkumar) ಯೋಜನೆಗೆ ಚಾಲನೆ ನೀಡಲಿದ್ದಾರೆ. ಚಾಲನೆ ನೀಡಿದ ಬಳಿಕ, ಪಡಿತರದಾರರ ಖಾತೆಗೆ ಪ್ರತಿ ಕುಟುಂಬದ ಫಲಾನುಭವಿಗಳ ಖಾತೆಗೆ ರೂ.170 ಹಣ ಡಿಬಿಟಿ ಮೂಲಕ ಜಮಾ ಆಗಲಿದೆ.
ಇನ್ನು ಕರ್ನಾಟಕದಲ್ಲಿ ಅಂತ್ಯೋದಯ ಅನ್ನಯೋಜನೆ ಹಾಗೂ ಆದ್ಯತಾ ಗೃಹದ ಅಂದರೆ ಬಿಪಿಎಲ್, ಎಪಿಎಲ್ ಕಾರ್ಡ್ ದಾರರ ಸಂಖ್ಯೆ ಒಟ್ಟು 1.28 ಕೋಟಿಯಾಗಿದೆ. ಇವರಲ್ಲಿ 1.06 ಕೋಟಿ ಪಡಿತರ ಫಲಾನುಭವಿಗಳ ಖಾತೆಗೆ ನಾಳೆ ಅನ್ನಭಾಗ್ಯ ಯೋಜನೆ (Anna Bhagya Scheme )ನ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಹಣ ಜಮಾಗೆ ಚಾಲನೆ ನೀಡಿದ ಬಳಿಕ, ಖಾತೆಗೆ ವರ್ಗಾವಣೆಯಾಗಲಿದೆ. ಅಲ್ಲದೆ 1.27 ಕೋಟಿ ಪಡಿತರ ಚೀಟಿಗಳಲ್ಲಿ ಒಬ್ಬ ಸದಸ್ಯನನ್ನು ಕುಟುಂಬಗಳ ಮುಖ್ಯಸ್ಥರು ಎಂದು ಗೊತ್ತುಪಡಿಸಲಾಗಿದೆ. ಈ ಕುಟುಂಬಗಳ ಮುಖ್ಯಸ್ಥರುಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಶೇ.94% ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಆಗಿದ್ದಾರೆ. ಶೇ.5ರಷ್ಟು ಕುಟುಂಬಗಳ ಮುಖ್ಯಸ್ಥರು ಪುರುಷರು ಆಗಿದ್ದಾರೆ ಎಂಬುದಾಗಿ ತಿಳಿಸಿದೆ.
ಅಲ್ಲದೆ ರಾಜ್ಯ ದಲ್ಲಿ ಸುಮಾರು 1.28 ಕೋಟಿ ಪಡಿತರ ಚೀಟಿಗಳಿವೆ. ಇವುಗಳಲ್ಲಿ ಶೇ.99ರಷ್ಟು ಕಾರ್ಡ್ ಗಳು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲ್ಪಟ್ಟಿವೆ. ಈ ಪೈಕಿ ಶೇ.82ರಷ್ಟು (1.06 ಕೋಟಿ) ಕಾರ್ಡ್ಗಳು ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕ ಹೊಂದಿವೆ. ಈ ಕಾರ್ಡ್ ಗಳಿಗೆ ನಗದು ವರ್ಗಾವಣೆ ಪ್ರಾರಂಭವಾಗುತ್ತದೆ. ಉಳಿದ ಪಡಿತರ ಚೀಟಿದಾರರಿಗೆ ಹೊಸ ಖಾತೆಗಳನ್ನು ತೆರೆಯಲು ತಿಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅಂತ್ಯೋದಯ ಕಾರ್ಡ್‌ದಾರರಿಗೆ ಹಣವಿಲ್ಲ:
ಅನ್ನಭಾಗ್ಯ ಜಾರಿಗೆ ದಿನಾಂಕ ಘೋಷಣೆ ಬೆನ್ನಲ್ಲೇ ಸರ್ಕಾರ ಇದೀಗ ಹತ್ತಾರು ಕಂಡೀಷನ್ ಹಾಕುತ್ತಿದೆ. ಅಂತ್ಯೋದಯ(Antyodaya card) ಕಾರ್ಡ್ ಹೊಂದಿದವರಿಗೆ ಷರತ್ತು ವಿಧಿಸಿದೆ. ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಜನರಿದ್ದರೆ ಅಕ್ಕಿಯ ಬದಲಾಗಿ ಹಣ ಸಿಗುವುದಿಲ್ಲ. ಅಂತ್ಯೋದಯ ಕಾರ್ಡ್‌ಗೆ ಈಗ 35ಕೆಜಿ ಅಕ್ಕಿ ನೀಡಲಾಗ್ತಿದೆ. ಆದರೆ, ಮೂವರಿಗೆ 35 ಕೆಜಿ ಅಕ್ಕಿ ಸಾಕು ಅನ್ನೋದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಅವರಿಗೆ ಹೆಚ್ಚುವರಿ ಅಕ್ಕಿ ದೊರೆಯುವುದಿಲ್ಲ ಅಂತ್ಯೋದಯ ಕಾರ್ಡ್ನಲ್ಲಿ 4 ಜನರಿದ್ರೆ 35 ಕೆಜಿ ಅಕ್ಕಿ ಜತೆ 170 ರೂ. ಹಣ ಲಭ್ಯವಾಗುತ್ತದೆ.
ಮೂರು ತಿಂಗಳು ಅಕ್ಕಿ ಪಡೆಯದಿದ್ದರೆ ಹಣವಿಲ್ಲ: ಅಂತ್ಯೋದಯ ಕಾರ್ಡ್ ಗೆ ಇರುವ ನಿಯಮ BPL ಕಾರ್ಡ್ ದಾರರಿಗಿಲ್ಲ. ಆದರೆ ಅವರಿಗೆ ಮತ್ತೊಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಕಳೆದ ಮೂರು ತಿಂಗಳಿನಿಂದ ಯಾರು ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಯನ್ನು ಪಡೆದುಕೊಂಡಿಲ್ಲವೋ ಅಂತಃ ಕುಟುಂಬಗಳಿಗೆ ಅಕ್ಕಿಯ ಬದಲಾಗಿ ಹಣವನ್ನು ವಿತರಣೆ ಮಾಡುವುದಿಲ್ಲ. ಕೇವಲ ಅಕ್ಕಿ ಮಾತ್ರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
