Rape On calf: ಆಧುನಿಕ ಯುಗದಲ್ಲಿ ಮನುಷ್ಯರು ಮೃಗಗಳಿಗಿಂತಲೂ ಹೀನವಾಗಿ ವರ್ತಿಸುತ್ತಿದ್ದಾರೆ. ಜನರಲ್ಲಿ ಕಾಮಾಂಧತೆ ಹೆಚ್ಚುತ್ತಿದೆ. ಸಣ್ಣ ಸಣ್ಣ ಯುವಕರು ಅತ್ಯಾಚಾರಕ್ಕೆ ಮುಂದಾಗುತ್ತಿದ್ದಾರೆ. ಅದೆಷ್ಟೋ ಜನರು ನಾಯಿ, ಮೇಕೆ, ಮರಗಳೊಡನೆ ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ವಿಚಿತ್ರವಾಗಿ ವರ್ತಿಸಿರುವ ಘಟನೆಯೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಅಂತೆಯೇ ಬಾಲಕನೊಬ್ಬ ಮುಗ್ಧ ಸಾಕು ಪ್ರಾಣಿಯಾದ ಹಸುವಿನ ಕರುವನ್ನೇ ಅತ್ಯಾಚಾರ (Rape On calf) ಮಾಡಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ (Himachal Pradesh) ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಬಿಜ್‌ಹಾರಿ ಪ್ರದೇಶದ ಗ್ರಾಮವೊಂದರ ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ಬಾಲಕ ಅತ್ಯಾಚಾರ ಮಾಡುತ್ತಿದ್ದನು. ಇದನ್ನು
ಕಂಡ ಮಹಿಳೆಯೊಬ್ಬರು ಆಶ್ಚರ್ಯಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನ ಈ ಹೀನ ಕೃತ್ಯ ಗ್ರಾಮದ ಎಲ್ಲೆಡೆ ಪಸರಿಸಿದೆ.
ಮುಗ್ಧ ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿರುವ
ಸುದ್ದಿ ಪ್ರದೇಶದ ವ್ಯಾಪ್ತಿಯಲ್ಲಿರುವ ಹಿಂದು ಸಂಘಟನೆಗಳ ಮುಖಂಡರಿಗೆ ತಿಳಿದು, ತೀವ್ರ ಆಕ್ರೋಶಗೊಂಡ ಮುಖಂಡರು ಯುವಕನ ಹೀನ ಕೃತ್ಯಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಅಲ್ಲದೆ, ಯುವಕನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ.
ಪ್ರತಿಭಟನೆ ಬೆನ್ನಲ್ಲೇ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.
ಸದ್ಯ ಬಾಲಕನ ಈ ಹೀನ ಕೃತ್ಯ ಇಡೀ ಮಾನವ ಕುಲಕ್ಕೆ ನಾಚಿಗೇಡಿನ ಸಂಗತಿ. ಹಸುವಿನಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಗೋವನ್ನು ಹಿಂದೂಗಳು ಪೂಜಿಸುತ್ತಾರೆ. ಆದರೆ, ಏನೂ ಅರಿಯದ, ಮಾತು ಬಾರದ ಮುಗ್ಧ ಪ್ರಾಣಿಯ ಮೇಲೆ ಅತ್ಯಾಚಾರ ನಡೆಸಿರುವುದು ಭಾರೀ ದೊಡ್ಡ ತಪ್ಪು. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದವರು ಇದೀಗ ಪ್ರಾಣಿಗಳ ಮೇಲೂ ರೇಪ್ ಮಾಡುವಂತಹ ಕಾಲ ಬಂದಿದೆ.
ಇದನ್ನೂ ಓದಿ: ಮಹಿಳೆಯರೇ ಎಚ್ಚರ! ಸ್ನಾನದ ವೀಡಿಯೋ ಮಾಡುತ್ತಿದ್ದ ಕಾಮುಕ ಅರೆಸ್ಟ್!
