Train accident: ಒಡಿಶಾದಲ್ಲಿ ನಡೆದ ರೈಲು ದುರಂತ ಘಟನೆ(Train accident) ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಈ ಘಟನೆ ಮಾಸುವ ಮುನ್ನವೇ, ಇಂದು ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಸರಕು ತುಂಬಿದ ಹಾಗೂ ನಿರ್ವಹಣೆಗೆ ನಿಂತಿದ್ದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆ ಪಶ್ಚಿಮಬಂಗಾಳದ ಬಂಕುರ ಜಿಲ್ಲೆ ಒಂಡಾಗ್ರಾಮ್ ಎನ್ನುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹಾಗಾಗಿ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಈ ನಿಲ್ದಾಣದಲ್ಲಿ ರೈಲು ಮಾರ್ಗಗಳ ನಿರ್ವಹಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಹೊರಟಿದ್ದ ಗೂಡ್ಸ್ ರೈಲು ನಿಲ್ದಾಣದಲ್ಲಿ ನಿಂತಿದ್ದ ನಿರ್ವಹಣಾ ರೈಲಿಗೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಂಪು ಸಿಗ್ನಲ್ ಹಾಕಿದರೂ ರೈಲು ನಿಲ್ಲದೇ ವೇಗವಾಗಿ ಹೊರಟಿದೆ ಎಂದು ವರದಿಯಾಗಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದ್ದು, ನಿಜವಾದ ಕಾರಣ ನಂತರ ತಿಳಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??
