Home » Hijab: ಹಿಜಾಬ್ ಹಾಕದೆ ಬಂದ ಬಾಲಕಿಯರನ್ನು ತಡೆದ ಮುಸ್ಲಿಂ ವಿದ್ಯಾರ್ಥಿ, ಹುಡುಗನಿಗೆ ಹಿಗ್ಗಾಮುಗ್ಗ ಥಳಿತ !

Hijab: ಹಿಜಾಬ್ ಹಾಕದೆ ಬಂದ ಬಾಲಕಿಯರನ್ನು ತಡೆದ ಮುಸ್ಲಿಂ ವಿದ್ಯಾರ್ಥಿ, ಹುಡುಗನಿಗೆ ಹಿಗ್ಗಾಮುಗ್ಗ ಥಳಿತ !

0 comments
Hijab

Hijab: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ 10ನೇ ತರಗತಿ ವಿದ್ಯಾರ್ಥಿಯನ್ನು ಶಾಲೆಯ ಮುಂದೆ ಎಳೆದೊಯ್ದು ಥಳಿಸಲಾಗಿದೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಿಜಬ್‌ (Hijab) ಹಾಕದೇ ಶಾಲೆಗೆ ಹೋಗುತ್ತಿದ್ದಾಗ ತಡೆದ ಮುಸ್ಲಿಂ ವಿದ್ಯಾರ್ಥಿಯನ್ನು ಬಲಪಂಥೀಯ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತ್ರಿಪುರಾದಲ್ಲಿ (Tripura) ನಡೆದಿದೆ.

ಮಾಹಿತಿ ಪ್ರಕಾರ, 10ನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಯ ಮುಂದೆ ಎಳೆದೊಯ್ದು ಥಳಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಮುಖ್ಯೋಪಾಧ್ಯಾಯರು ಸೇರಿದಂತೆ ಯಾವುದೇ ಶಿಕ್ಷಕರು ಆತನ ರಕ್ಷಣೆಗೆ ಬರಲಿಲ್ಲ. ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಅಲ್ಲದೇ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಆದರೆ ಹಲ್ಲೆ ನಡೆಸಿದವರು ಹೊರಗಿನವರಾಗಿದ್ದು, ಅವರಿಗೂ ಶಾಲೆಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವರದಿಯಾಗಿದೆ.

ಶಾಲೆಯ ಅಧಿಕಾರಿಗಳ ಪ್ರಕಾರ, ಒಂದು ವಾರದ ಹಿಂದೆ ಬಲಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ವಿದ್ಯಾರ್ಥಿಗಳ ಗುಂಪು ಶಾಲೆಗೆ ಬಂದು ಶಾಲಾ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವ ಬಗ್ಗೆ ಚರ್ಚೆ ವ್ಯಕ್ತಪಡಿಸಿತ್ತು. ಮತ್ತು ಹಿಜಬ್‌ ಧರಿಸೋದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯೋಪಾಧ್ಯಾಯರನ್ನು ವಿನಂತಿಸಿತು.

ಇಂತಹ ನಿಯಮಕ್ಕೆ ಸಂಬಂಧಪಟ್ಟ ಸರ್ಕಾರಿ ಇಲಾಖೆಯಿಂದ ಸ್ಪಷ್ಟ ಸೂಚನೆ ಇಲ್ಲದ ಕಾರಣ ಶಾಲೆಯಲ್ಲಿ ಹಿಜಬ್ ಧರಿಸದಂತೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಮೌಖಿಕವಾಗಿ ತಿಳಿಸಿದ್ದರು.

ಘಟನೆಯ ನಂತರ ಸೆಪಹಿಜಾಲಾ ಜಿಲ್ಲೆಯ ಬಿಶಾಲ್‌ಘರ್ ಉಪವಿಭಾಗವು ಉದ್ವಿಗ್ನ ಪರಿಸ್ಥಿತಿಯಲ್ಲಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಮಾಹಿತಿ ಇದೆ.

ಇದನ್ನೂ ಓದಿ: ಈಜಲು ನದಿಗಿಳಿದ ಫುಟ್ ಬಾಲ್ ಆಟಗಾರ ಮೊಸಳೆ ದಾಳಿಗೆ ಬಲಿ

You may also like