Home » Uttar pradesh: ಕೈ ಸುಡುತ್ತಿರುವ ಬೆಲೆ : ಟೊಮ್ಯಾಟೋ ಕಾಯಲೆಂದೇ ಬೌನ್ಸರ್ ನೇಮಿಸಿಕೊಂಡ ವ್ಯಾಪಾರಿ !!

Uttar pradesh: ಕೈ ಸುಡುತ್ತಿರುವ ಬೆಲೆ : ಟೊಮ್ಯಾಟೋ ಕಾಯಲೆಂದೇ ಬೌನ್ಸರ್ ನೇಮಿಸಿಕೊಂಡ ವ್ಯಾಪಾರಿ !!

by ಹೊಸಕನ್ನಡ
0 comments

Uttar Pradesh : ಟೊಮ್ಯಾಟೊ(Tomato) ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರೋರಾತ್ರಿ ಟೊಮ್ಯಾಟೊ ಕದ್ದೊಯ್ಯುತ್ತಿದ್ದಾರೆ. ಹೀಗಾಗಿ ಇಲ್ಲೊಬ್ಬ ತರಕಾರಿ ವ್ಯಾಪಾರಿ ಮಾಸ್ಟರ್​ ಪ್ಲ್ಯಾನ್​​(Master plan) ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಹೌದು, ಟೊಮೆಟೊ ಇದೀಗ ಅತ್ಯಂತ ದುಬಾರಿ. ಹಲವು ರಾಜ್ಯಗಳಲ್ಲಿ 200ರ ಗಡಿ ದಾಟಿದೆ. ರಾತ್ರೋರಾತ್ರೋ ಹೊಲದಿಂದ ಟೊಮೆಟೊ ಕದ್ದೊಯ್ದ ಘಟನೆಯೂ ನಡೆದಿದೆ. ಕೆಲ ಟೊಮೆಟೋ ಮಾರುಕಟ್ಟೆಯಲ್ಲಿ ಜಗಳವೇ ನಡೆದು ಹೋಗಿದೆ. ಹೀಗಾಗಿ ಈ ಉಸಾಬರಿ ಬೇಡ ಎಂದು ಉತ್ತರ ಪ್ರದೇಶದ(Uttar pradesh) ವಾರಣಾಸಿಯ(Varanasi) ತರಕಾರಿ ವ್ಯಾಪಾರಿಯೊಬ್ಬ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ನೇಮಕ ಮಾಡಿದ್ದಾರೆ.

ಟೊಮ್ಯಾಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಗ್ರಾಹಕರನ್ನು ಟೊಮ್ಯಾಟೊ ಮುಟ್ಟಲು ಈ ಬೌನ್ಸರ್(Bouncers) ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮ್ಯಾಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಟೊಮ್ಯಾಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯ ವೈರಲ್ ಆಗಿದೆ.

ನನ್ನ ಅಂಗಡಿಯಲ್ಲಿ ಟೊಮೆಟೋಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಟೊಮೆಟೋ 160 ರೂ. ಕೆಜಿ ಗೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರ ಅಜಯ್ ಫೌಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ಇತ್ತೀಚೆಗೆ ಕರ್ನಾಟಕದ ಕೋಲಾರ(Kolara), ಹಾಸನ(Hassan) ಜಿಲ್ಲೆಗಳಲ್ಲಿ ಕೂಡ ರೈತರು ಕಷ್ಟಪಟ್ಟು ಬೆಳೆದ ಟೊಮೆಟೋ ಗಳನ್ನು ಕಳ್ಳತನ ಮಾಡಿದ್ದರು. ಇದನ್ನು ತಡೆಗಟ್ಟಲು ರೈತರು ಗಂಭೀರ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ವರದಿಯಾಗಿತ್ತು. ರೈತರೊಬ್ಬರು ತಮ್ಮ ಜಮೀನಿನಲ್ಲಿ ರಾತ್ರೋರಾತ್ರಿ 3 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: Belgavi: ಜೈನ ಮುನಿ ಕೊಲೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ‘ಡಬಲ್ ಮರ್ಡರ್’!! ದಂಪತಿಗಳನ್ನು ಕೊಚ್ಚಿ ಬರ್ಬರವಾಗಿ ಕೊಂದ ಪಾಪಿಗಳು !!

You may also like

Leave a Comment