Home » Uttara Kannada news: ಪ್ಯಾರಲಿಸಿಸ್‌ ಬಾರದಂತೆ ಮುನ್ನೆಚ್ಚರಿಕೆಯಾಗಿ ಇಂಜೆಕ್ಷನ್‌ ಪಡೆದ ಮಹಿಳೆ ಆಸ್ಪತ್ರೆಯಲ್ಲೇ ಕುಸಿದು ಸಾವು! ಕುಟುಂಬಸ್ಥರ ಆಕ್ರೋಶ

Uttara Kannada news: ಪ್ಯಾರಲಿಸಿಸ್‌ ಬಾರದಂತೆ ಮುನ್ನೆಚ್ಚರಿಕೆಯಾಗಿ ಇಂಜೆಕ್ಷನ್‌ ಪಡೆದ ಮಹಿಳೆ ಆಸ್ಪತ್ರೆಯಲ್ಲೇ ಕುಸಿದು ಸಾವು! ಕುಟುಂಬಸ್ಥರ ಆಕ್ರೋಶ

by Mallika
0 comments

Uttara Kannada news: ಕಾರವಾರ ತಾಲೂಕಿನ ಹಳಗಾ ಗ್ರಾಮದ ಸೆಂಟ್‌ ಮೇರಿಸ್‌ ಆಸ್ಪತ್ರೆಗೆ ಮಹಿಳೆಯೋರ್ವಳು ಭೇಟಿ ನೀಡಿದ್ದು, ತನ್ನ ತಂದೆ ಪ್ಯಾರಲಿಸಿಸ್‌ (Paralysis) ಆಗಿದೆ ಎಂದು ಚಿಕಿತ್ಸೆ ಪಡೆಯುತ್ತಿದ್ದು, ಅದಕ್ಕಾಗಿ ಡಾಕ್ಟರ್‌ ಮಹಿಳೆಗೆ ಪ್ಯಾರಲಿಸಿಸ್‌ ಬರದಂತೆ ಮೊದಲೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ವೈದ್ಯರು ಮಹಿಳೆಗೆ ಹೇಳಿದ್ದರು ಎನ್ನಲಾಗಿದೆ. ಇನ್ನು ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದಂತೆ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.

ಹೌದು, ಇಂತಹ ಒಂದು ಘಟನೆ ನಡೆದಿದ್ದು, ಒಂದು ಕಡೆ ಮೃತದೇಹದ ಮುಂದೆ ಕುಟುಂಬಸ್ಥರ ರೋದನ, ಮಗುವಿಗೆ ತಾಯಿಯ ಮುಖ ತೋರಿಸದೆ ತಂದೆಯೋರ್ವ ಹೊರಗೆ ಅಲೆದಾಡುತ್ತಿರುವ ಪರದಾಟ, ಆಸ್ಪತ್ರೆಗೆ ತಕ್ಷಣವೇ ಬಂದ ಪೊಲೀಸರು ಈ ದೃಶ್ಯವೆಲ್ಲ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ (Uttara Kannada news) ಆಸ್ಪತ್ರೆಯಲ್ಲಿ.

ಸ್ವಪ್ನ ರಾಯ್ಕರ್‌ (32) ಎನ್ನುವ ಮಹಿಳೆಯೇ ಮೃತ ಹೊಂದಿದ್ದು. ಮಹಿಳೆ ಕುಸಿದು ಬೀಳುತ್ತಿದ್ದಂತೆಯೇ ಆಸ್ಪತ್ರೆಯವರೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ಸಾಗಿಸಿದ್ದರು. ಆದರೆ ಸಾಗಿಸುವ ಸಮಯದಲ್ಲೇ ಆಕೆ ಮೃತಪಟ್ಟಿದ್ದಾರೆ. ಅಂದ ಹಾಗೆ ಈ ಆಸ್ಪತ್ರೆಯಲ್ಲಿ ಯಾವ ಮದ್ದಿಗೆ ಯಾವ ಇಂಜೆಕ್ಷನ್‌ ಕೊಡ್ತಾರೆ ಎಂದು ತಿಳಿಸುವುದಿಲ್ಲ. ಇದೆಲ್ಲ ಸರಿಯಾದ ರೀತಿಯಲ್ಲಿ ಇಲ್ಲಿ ನಡೆಯುವುದಿಲ್ಲ ಎಂದು ಹಲವರು ಮಂದಿ ವಿರೋಧ ಮಾಡಿದ್ದರು. ಹಾಗೆನೇ ಸೆಂಟ್‌ ಮೇರಿಸ್‌ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಪ್ಯಾರಲಿಸಿಸ್‌ಗೆ ಚುಚ್ಚುಮದ್ದು ನೀಡುತ್ತಿದ್ದು, ಇದು ಸರಿಯಲ್ಲ ಎಂದು ಈ ಆಸ್ಪತ್ರೆ ಮೇಲೆ ಹಿಂದಿನಿಂದಲೂ ಆರೋಪವಿದೆ ಎಂದು ವರದಿಯಾಗಿದೆ.

ಈ ಮಹಿಳೆ ಕೂಡಾ ಇದೇ ಇಂಜೆಕ್ಷನ್‌ ತೆಗೆದುಕೊಂಡು ಮೃತಪಟ್ಟಿದ್ದು, ಆಸ್ಪತ್ರೆ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: “ನಾಯಿಯ ರೀತಿ ಬೊಗಳು ” ಎಂದು ಹಿಂದೂ ಯುವಕನಿಗೆ ಚಿತ್ರಹಿಂಸೆ: ಮೂವರು ಅರೆಸ್ಟ್

You may also like

Leave a Comment