LPG: ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮತ್ತು ಹೇಳಿಕೆಯಾಗುತ್ತದೆ. ಅದರಲ್ಲೂ ಗೃಹಬಳಕೆಯ ಸಿಲಿಂಡರ್ ದರ ಅನೇಕ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ. ಆದರೆ ಈ ನಡುವೆ ಎಲ್ಪಿಜಿ ಗ್ರಾಹಕರಿಗೆ ಬೆಲೆ ಇಳಿಕೆಯ ಕುರಿತು ಸಹಿಸುದ್ದಿ ಎಂದು ಸಿಕ್ಕಿದೆ.
ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಎಲ್‌ಪಿಜಿಯನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಲು ಮುಂದಾಗಿವೆ ಎಂದು ವರದಿಯಾಗಿದೆ. ಯಸ್, ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಈಗಾಗಲೇ ಅಮೆರಿಕದಿಂದ ಎಲ್‌ಪಿಜಿ ಖರೀದಿಗಾಗಿ ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಸಾಂಪ್ರದಾಯಿಕವಾಗಿ ಭಾರತದ ಎಲ್‌ಪಿಜಿ ಆಮದುಗಳ ಮೇಲೆ ಪ್ರಾಬಲ್ಯವನ್ನು ಹೊಂದಿರುವ ಮಧ್ಯಪ್ರಾಚ್ಯದಿಂದ ಹೊರಳುವಿಕೆಯನ್ನು ಸೂಚಿಸುತ್ತದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಅಮೆರಿಕದ ಎಲ್‌ಪಿಜಿ ಬೆಲೆಯನ್ನು ವಿಭಿನ್ನ ಮಾನದಂಡದ ಮೇಲೆ ನಿಗದಿಗೊಳಿಸಲಾಗಿದೆ ಮತ್ತು ಸುದೀರ್ಘ ಸಾಗಾಣಿಕೆ ಮಾರ್ಗವನ್ನು ಒಳಗೊಂಡಿದೆ. ಪರಿಣಾಮವಾಗಿ ಸಾಗಾಣಿಕೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಹೆಚ್ಚಾಗುತ್ತವೆ. ಹೊಸ ಪೂರೈಕೆ ವ್ಯವಸ್ಥೆಗಳಡಿ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ 2026ರ ಆರಂಭದಿಂದ ಅಮೆರಿಕದಿಂದ ಒಟ್ಟು ಸುಮಾರು 22 ಲಕ್ಷ ಟನ್ ಎಲ್‌ಪಿಜಿಯನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲಿವೆ. ಇದು ಭಾರತದ ಒಟ್ಟು ಎಲ್‌ಪಿಜಿ ಆಮದುಗಳ ಕೇವಲ ಶೇ.10ರಷ್ಟಿದ್ದರೂ ಅದು ತೈಲ ಮಾರಾಟ ಕಂಪನಿಗಳ ವೆಚ್ಚ ಸ್ವರೂಪದ ಮೇಲೆ, ವಿಶೇಷವಾಗಿ ಜಾಗತಿಕ ಬೆಲೆಗಳು ಅಸ್ಥಿರವಾಗಿರುವ ಅವಧಿಗಳಲ್ಲಿ,ಭೌತಿಕ ಪ್ರಭಾವವನ್ನು ಬೀರುತ್ತದೆ. ಅಧಿಕ ಸಾಗಾಣಿಕೆ ವೆಚ್ಚವನ್ನು ಸರಿದೂಗಿಸಲು ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಾದಾಗ ಮಾತ್ರ ಅಮೆರಿಕದಿಂದ ಎಲ್‌ಪಿಜಿ ಆಮದು ಮಿತವ್ಯಯಕಾರಿಯಾಗಿರುತ್ತದೆ.
