Home » Shocking News: ಎಳೆಯ ಎಮ್ಮೆ ಕರುವಿನ ಮೇಲೆ ಯುವ ಕಾಮುಕನ ಅಟ್ಟಹಾಸ !!

Shocking News: ಎಳೆಯ ಎಮ್ಮೆ ಕರುವಿನ ಮೇಲೆ ಯುವ ಕಾಮುಕನ ಅಟ್ಟಹಾಸ !!

1 comment
Pune

Pune Shocker: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಮನುಷ್ಯರ ಮೇಲೆ ವಿಕೃತಿ ತೋರುವುದಲ್ಲದೆ ಏನು ಅರಿಯದ ಮುಗ್ಧ ಜೀವಿಗಳ ಮೇಲೆ ಕೂಡ ದೌರ್ಜನ್ಯ ಎಸಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.ಪುಣೆಯಲ್ಲಿ ಎಮ್ಮೆಯ ಎಳೆಯ ಕರುವಿನ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ (Pune Shocker)ಹೇಯ ಕೃತ್ಯ ವರದಿಯಾಗಿದೆ.

ಪುಣೆಯಲ್ಲಿ ಯುವಕನೊಬ್ಬ ಎಮ್ಮೆ ಕರುವಿನ (Buffalo Calf) ಮೇಲೆ ಅತ್ಯಾಚಾರ (Sexual Assault) ನಡೆಸಿದ ಘಟನೆ ವರದಿಯಾಗಿದೆ. ಪುಣೆಯ ಚಿಕಾಲಿಯ ಜಾಧವವಾಡಿ ಪ್ರದೇಶದಲ್ಲಿ ಆಗಸ್ಟ್ 18 ಹಾಗೂ ಅಕ್ಟೋಬರ್ 2 ರ ನಡುವೆ ಆರೋಪಿ ಯುವಕ ಎಮ್ಮೆಯ ಕರುವಿನ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಪುಣೆಯ ಚಿಕಾಲಿ (Pune Chikhali) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕ ನಿರಂತರವಾಗಿ ಎಮ್ಮೆ ಕರುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಯುವಕನ ವಿರುದ್ಧ ಎಫ್ಐಆರ್ (FIR Registered) ದಾಖಲಾಗಿದೆ.

ಎಮ್ಮೆ ಮಾಲೀಕರು ಮುಂಜಾಗ್ರತಾ ಕ್ರಮವಾಗಿ ಶೆಲ್ಟರ್‌ನಲ್ಲಿ ಸಿಸಿಟಿವಿ ಅಳವಡಿಸಿದ್ದರು ಎನ್ನಲಾಗಿದೆ. ಹೀಗಿದ್ದರೂ ಕೂಡ ಆರೋಪಿ ಲೈಟ್ಸ್ ಆಫ್ ಮಾಡಿ, ಕರುವಿನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎನ್ನಲಾಗಿದೆ. ಲೈಟ್ಸ್ ಆಫ್ ಆಗುತ್ತಿದ್ದ ಹಿನ್ನೆಲೆ ಅನುಮಾನಗೊಂಡು ಮಾಲೀಕರು ಎಮ್ಮೆ ಕರುವನ್ನು ಗಮನಿಸಿದಾಗ ನೋವಿನಿಂದ ನರಳುವುದು ಕಂಡುಬಂದಿದೆ.ಹೀಗಾಗಿ, ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ, ಯುವಕ ಎಮ್ಮೆ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಮಹಾರಾಜಗಂಜ್ ‌ಮೂಲದವನಾದ ರಾಮಕಿಶನ್ ಚೌಹಣ್(24) ಬಂಧಿತ ಆರೋಪಿ ಎನ್ನಲಾಗಿದೆ. ಸದ್ಯ ಪುಣೆಯ ಚಿಕಾಲಿ ಪ್ರದೇಶದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಸ್ಥಳೀಯರು ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳು ಮತ್ತು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: Bengaluru News: ಕಾಲೇಜ್ ಹುಡುಗಿಯರ ‘ದಮ್’ ಹೊಡಿಯೋ ವಿಡಿಯೋ ವೈರಲ್ – ನಾವೇ ಸ್ಟ್ರಾಂಗ್ ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ ಹೆಣ್ಣೈಕ್ಳು

You may also like

Leave a Comment