Maharashtra: ಮಹಾರಾಷ್ಟ್ರದ (Maharashtra) ನಾಗ್ಪುರದ ಬಳಿ ಪ್ರಿಯತಮೆ(Lover)ಜೊತೆಗೆ ಲಾಡ್ಜ್ ಗೆ(Lodge) ತೆರಳಿದ್ದ ಯುವಕ ಏಕಾಏಕಿ ಸಾವನ್ನಪ್ಪಿರುವ(Died )ದಾರುಣ ಘಟನೆ ನಡೆದಿದೆ. ಯುವಕನ ಸಾವಿಗೆ ಕಾರಣ ಮಾತ್ರ ನಿಗೂಢವಾಗಿ ಉಳಿದಿದೆ.
ಮಹಾರಾಷ್ಟ್ರದ ನಾಗ್ಪುರದ ಬಳಿ ಪ್ರೇಯಸಿಯ ಜೊತೆಗೆ ಲಾಡ್ಜ್ ಗೆ ತೆರಳಿದ್ದ ಯುವಕ ಏಕಾಏಕಿ ಸಾವನ್ನಪ್ಪಿರುವ(Death )ದಾರುಣ ಘಟನೆ ವರದಿಯಾಗಿದೆ.ಮೃತ ಯುವಕನನ್ನು ಕೃಷ್ಣ ರಾಯಭನ್ ಧಂಜೋಡೆ (23) ಎಂದು ಗುರುತಿಸಲಾಗಿದೆ. ಅರ್ಜುನಿ-ಮೋರ್ಗಾಂವ್ ತಾಲೂಕಿನ ಜರ್ಫಡಾದ( 23) ಯುವತಿಯೊಂದಿಗೆ ಕೃಷ್ಣ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಭಾನುವಾರದಂದು ಇಬ್ಬರು ಭೇಟಿಯಾಗಿ ಜೊತೆಗೆ ಸುತ್ತಾಟ ನಡೆಸಿ ಭಂಡಾರಾ ನಗರದ ಲಾಡ್ಜ್‌ವೊಂದರಲ್ಲಿ ತಂಗಿದ್ದರೆನ್ನಲಾಗಿದೆ.ಮಾರನೇ ದಿನ ಬೆಳಿಗ್ಗೆ ಆತನನ್ನು ಎಬ್ಬಿಸಲು ಹೊರಟಾಗ ಯುವತಿಗೆ ಶಾಕ್ ಕಾದಿತ್ತು.
ಮಾರನೇ ದಿನ ಮುಂಜಾನೆ ವೇಳೆಗೆ ಯುವಕನನ್ನು ಎಬ್ಬಿಸಲು ಯುವತಿ ಹರಸಾಹಸ ಪಟ್ಟರು ಯುವಕನಿಗೆ ಎಚ್ಚರವಾಗಿಲ್ಲ. ಆತ ಮೇಲೇಳಲೆ ಇಲ್ಲ ಎನ್ನಲಾಗಿದೆ. ಹೀಗಾಗಿ, ಏನು ಮಾಡಬೇಕೆಂದು ತೋಚದೇ ಯುವತಿ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ನೀಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಯುವಕನನ್ನು ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದು, ಈ ಸಂಬಂಧ ಭಂಡಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪುತ್ತೂರು : ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಹೃದಯಾಘಾತದಿಂದ ನಿಧನ
