Home » Mangalore: ವೃದ್ಧ ಮಾವನಿಗೆ ಸೊಸೆಯಿಂದ ಮನಸೋ ಇಚ್ಛೆ ಹಲ್ಲೆ, ವಿದೇಶದಲ್ಲಿದ್ದ ಮಗನ ಕಣ್ಣಿಗೆ ಬಿತ್ತು ದೃಶ್ಯ, ಆರೋಪಿತ ಕೆಇಬಿ ಅಧಿಕಾರಿ ಮಹಿಳೆ ಬಂಧನ

Mangalore: ವೃದ್ಧ ಮಾವನಿಗೆ ಸೊಸೆಯಿಂದ ಮನಸೋ ಇಚ್ಛೆ ಹಲ್ಲೆ, ವಿದೇಶದಲ್ಲಿದ್ದ ಮಗನ ಕಣ್ಣಿಗೆ ಬಿತ್ತು ದೃಶ್ಯ, ಆರೋಪಿತ ಕೆಇಬಿ ಅಧಿಕಾರಿ ಮಹಿಳೆ ಬಂಧನ

0 comments

Mangalore News: ಮಂಗಳೂರು ನಗರದ ಕುಲಶೇಖರದಲ್ಲಿ ವೃದ್ಧ ಮಾವನನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದು, ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧನ ಮಾಡಿದ್ದಾರೆ.

ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ (76) ಎಂಬುವವರೇ ಹಲ್ಲೆಗೊಳಗಾದವರು. ಪ್ರೀತಂ ಎಂಬುವವರು ಇವರ ಮಗ. ಇವರು ವಿದೇಶದಲ್ಲಿ ಕೆಲಸಕ್ಕಿದ್ದು, ಮನೆಯಲ್ಲಿ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್‌ ಮಾಡಿದ್ದರು. ತನ್ನ ಪತ್ನಿ ಉಮಾಶಂಕರಿ ಅವರು ಎರಡು ದಿನಗಳ ಹಿಂದೆ ವಾಕಿಂಗ್‌ ಸ್ಟಿಕ್‌ನಲ್ಲಿ ಹಲ್ಲೆ ನಡೆಸಿರುವುದು ಸಿಸಿಟಿವಿ ಮುಖಾಂತರ ಗಮನಕ್ಕೆ ಬಂದಿದೆ. ಅದರಂತೆ ಪ್ರೀತಂ ಸುವರ್ಣ ತನ್ನ ತಂಗಿ ಮೂಡಬಿದಿರೆಯಲ್ಲಿ ಗಂಡನ ಮನೆಯಲ್ಲಿರುವ ಇರುವ ಪ್ರಿಯಾ ಎಂಬುವವರಿಗೆ ವಿಷಯ ತಿಳಿಸಿದ್ದರು.

ಸಿಸಿಟಿವಿ ದೃಶ್ಯ ಮುಂದಿಟ್ಟು ಪೊಲೀಸರಿಗೆ ದೂರು ನೀಡುವಂತೆ ಸೂಚನೆ ನೀಡಿದ್ದರು. ಈ ಪ್ರಕಾರ ಪ್ರಿಯಾ ಸುವರ್ಣ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಹಲ್ಲೆಗೀಡಾದ ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆರೋಪಿ ಮಹಿಳೆ ಉಮಾ ಶಂಕರಿ ಅವರು ಕೆಇಬಿ ಅತ್ತಾವರದಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ. ಸರಕಾರಿ ಅಧಿಕಾರಿ ಎಂಬ ದರ್ಪವೋ ಏನೋ ವೃದ್ಧ ಮಾವನ ಮೇಲೆ ಹಲ್ಲೆ ಮಾಡಿ ಕೂಡಿ ಹಾಕಿದ್ದಾರೆ.

ಪೊಲೀಸರು ಇದೀಗ ಆರೋಪಿತ ಮಹಿಳೆಯ ಮೇಲೆ ಕೊಲೆಯತ್ನ ಕೇಸು ದಾಖಲು ಮಾಡಿದ್ದು, ಮಹಿಳೆಯನ್ನು ಬಂಧನ ಮಾಡಿರುವುದಾಗಿ ವರದಿಯಾಗಿದೆ.

You may also like

Leave a Comment