Home » Vande Bharat Express : ಮಂಗಳೂರಿಗರಿಗೆ ಸಿಹಿಸುದ್ದಿ; ಬರಲಿದೆ ಶೀಘ್ರವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು!

Vande Bharat Express : ಮಂಗಳೂರಿಗರಿಗೆ ಸಿಹಿಸುದ್ದಿ; ಬರಲಿದೆ ಶೀಘ್ರವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು!

0 comments
Vande Bharat Express

Vande Bharat Express: ಮಂಗಳೂರಿನ (mangaluru) ಜನರಿಗೆ ಭಾರತೀಯ ರೈಲ್ವೆಯು (Indian railways) ಗುಡ್ ನ್ಯೂಸ್ ನೀಡಲಿದೆ. ಹೌದು, ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮಂಗಳೂರಿಗೆ ಆಗಮಿಸಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲು ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗಿದೆ.

ಭಾರತೀಯ ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಒದಗಿಸಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಟೆಂಡರ್ ಕರೆಯಲಾಗಿದ್ದು, ಎಪ್ರಿಲ್ 14 2023ರ ತನಕ ಟೆಂಡರ್ ಸಲ್ಲಿಸಲು ಅವಕಾಶವಿದೆ ಎನ್ನಲಾಗಿದೆ. ಈ ಪ್ರಕ್ರಿಯೆಗಳು ಕೊನೆಗೊಂಡ ನಂತರ ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಸೂಚನೆ ನೀಡಲಾಗಿದೆ.

ಕೇರಳ (Kerala) ರಾಜ್ಯ ತಿರುವನಂತಪುರಂ-ಎರ್ನಾಕುಲಂ (ವಯಾ ಅಲಪ್ಪುಳ) ಮತ್ತು ಶೋರ್ನೂರ್-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ. ಈ ಎರಡೂ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಓಡಿಸಲು ಬೇಕಾದ ಕೆಲವು ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಕೇರಳ ರಾಜ್ಯದ ತಿರುವನಂತಪುರಂ ವಿಭಾಗ ಒಟ್ಟು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಯಾರಿಸಲು ಈಗಾಗಲೇ ಚೆನ್ನೈ ಕೋಚ್ ಫ್ಯಾಕ್ಟರಿಗೆ ಮನವಿ ಸಲ್ಲಿಸಲಾಗಿದೆ.

2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra modi) ಬೆಂಗಳೂರಿನಲ್ಲಿ (Bengaluru) ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲು ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ವಯಾ ಬೆಂಗಳೂರು ಸಂಚಾರ ನಡೆಸುತ್ತಿದೆ. ಇದೀಗ ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ಒಂದೇ ಒಂದು ವಂದೇ ಭಾರತ್ ರೈಲು ಇದಾಗಿದೆ. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡರೆ ರೈಲನ್ನು ತಿರುವನಂತಪುರಂ ತನಕ ವಿಸ್ತರಣೆ ಮಾಡಬಹುದು ಎಂದು ಹೇಳಿದ್ದರು. ಸದ್ಯ ಶೀಘ್ರವೇ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬರಲಿದೆ.

You may also like

Leave a Comment