Home » Pan card: ಇಂತವರ ಪಾನ್ ಕಾರ್ಡ್ ಇನ್ನು ನಿಷ್ಕ್ರಿಯ – ಕೇಂದ್ರದಿಂದ ಮಹತ್ವದ ನಿರ್ಧಾರ !! !!

Pan card: ಇಂತವರ ಪಾನ್ ಕಾರ್ಡ್ ಇನ್ನು ನಿಷ್ಕ್ರಿಯ – ಕೇಂದ್ರದಿಂದ ಮಹತ್ವದ ನಿರ್ಧಾರ !! !!

1 comment
Pan cards deactivated

Pan cards deactivated: ಸುಮಾರು 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ಕೇಂದ್ರೀಯನೇರ ತೆರಿಗೆ ಮಂಡಳಿ (CBDT) ಮಾಹಿತಿ ಹಕ್ಕು (RTI) ನೀಡಿದ ಉತ್ತರದಲ್ಲಿ ಈ ವಿಷಯ ತಿಳಿಸಲಾಗಿದೆ.

ಹೌದು, ಕೇಂದ್ರ ಸರ್ಕಾರವು ಹಲವಾರು ತಿಂಗಳುಗಳ ಕಾಲ ಆಧಾರ್ ಮತ್ತು ಪ್ಯಾನ್ ಕಾರ್ಡ್(Pan Card) ಗಳನ್ನು ಲಿಂಕ್ ಮಾಡಿ ಎಂದು ಸೂಚಿಸಿ ಸಾಕಷ್ಟು ಕಾಲಾವಕಾಶ ನೀಡಿತ್ತು. ಅವಧಿಗಳನ್ನು ನೀಡಿ ಅದನ್ನು ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೂ ಹಲವರು ಇದರ ಕುರಿತು ತಲೆಕೆಡಿಸಿಕೊಳ್ಳಲಿಲ್ಲ. ಆದರೀಗ 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯ(Pan cards deactivated)  ಗೊಳಿಸಲಾಗಿದೆ ಎಂದು RTI ತಿಳಿಸಿದೆ.

ಅಂದಹಾಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎಯ ಉಪ-ಸೆಕ್ಷನ್ (2) ರ ಅಡಿಯಲ್ಲಿ, ಜುಲೈ 1, 2017 ರಂತೆ ಪ್ಯಾನ್ ಮಂಜೂರು ಮಾಡಿದ ಪ್ರತಿಯೊಬ್ಬ ವ್ಯಕ್ತಿಯು “ತನ್ನ ಆಧಾರ್ ಸಂಖ್ಯೆಯನ್ನು ತಿಳಿಸುವುದು” ಕಡ್ಡಾಯವಾಗಿದೆ. ಭಾರತದಲ್ಲಿ 70.24 ಕೋಟಿ ಪ್ಯಾನ್ ಕಾರ್ಡ್ ದಾರರಿದ್ದು, ಅವರಲ್ಲಿ 57.25 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದ್ದಾರೆ. 12 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಿಲ್ಲ, ಅದರಲ್ಲಿ 11.5 ಕೋಟಿ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಇನ್ನು ಸರ್ಕಾರ ನೀಡಿದ ಅವಧಿ ಒಳಗಡೆ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದವರು ಇನ್ನು ಮುಂದಿನ ದಿನಗಳಲ್ಲಿ 1,000 ರೂಪಾಯಿಗಳಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Fixed deposit: ಇಟ್ಟವರಿಗೆ ಬಂತು ಹೊಸ ರೂಲ್ಸ್ – RBI ನಿಂದ ಹೊಸ ನಿರ್ಧಾರ !!

You may also like

Leave a Comment