Anurag thakur: ಎರಡು ದಿನಗಳಿಂದ ಬಹಳ ಸುದ್ದಿಯಲ್ಲಿತ್ತು ʼಇಂಡಿಯಾʼ ಎಂಬ ಪದ ಬಳಕೆಯ ಕುರಿತು. ಹೌದು, ಇಂಡಿಯಾ ಎಂಬುದರ ಬದಲಾಗಿ ʼಭಾರತʼ ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವದಂತಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್( Anurag thakur) ಸ್ಪಷ್ಟಪಡಿಸಿದ್ದಾರೆ. ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ ಎಂದು ನಮೂದಿಸಿರುವುದರಿಂದ ಇನ್ನು ಮುಂದೆ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿ ಹಬ್ಬಿದ್ದವು. ಇದೆಲ್ಲ ವದಂತಿ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಭಾರತದ ರಾಷ್ಟ್ರಪತಿ ಎಂಬುದನ್ನು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿದೆ. ಅದರಲ್ಲಿ ತಪ್ಪೇನಿದೆ? ಇದೊಂದು ದೊಡ್ಡ ವಿಷಯವೇ ಅಲ್ಲ. ಈ ಮೊದಲು ಸಹ ಹಲವು ಆಮಂತ್ರಣ ಪತ್ರಿಕೆಗಳನ್ನು ‘ಭಾರತ ಸರ್ಕಾರ್’ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ. ಆಗೆಲ್ಲಾ ಎಲ್ಲಿ ಸಮಸ್ಯೆಯಾಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಬಹಳಷ್ಟು ನ್ಯೂಸ್ ಚಾನಲ್‌ಗಳು ತಮ್ಮ ಹೆಸರಿನಲ್ಲಿ ಭಾರತ ಎಂಬುದನ್ನು ಅಳವಡಿಸಿಕೊಂಡಿವೆ. ಆದರೆ ಈ ಜನ ಮಾತ್ರ (ವಿಪಕ್ಷಗಳು) ಭಾರತ ಎಂಬ ಹೆಸರಿನೊಂದಿಗೆ ಅಲರ್ಜಿ ಹೊಂದಿದ್ದಾರೆ. ಈಗೀಗ ಕೆಲವರಿಗೆ ಭಾರತ ಎಂಬ ಹೆಸರು ನೋವುಂಟು ಮಾಡುತ್ತಿದೆ. ಇವರು ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ ಅವಮಾನಿಸುತ್ತಿದ್ದಾರೆ. ಇದು ಭಾರತ ಎಂಬ ಹೆಸರನ್ನು ವಿರೋಧಿಸುತ್ತಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
