Home » Elephants Found In Tamilnadu: ಏಕಕಾಲಕ್ಕೆ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ – ಅಬ್ಬಬ್ಬಾ.. ಭಯ ಹುಟ್ಟಿಸುತ್ತೆ ವಿಡಿಯೋ!!

Elephants Found In Tamilnadu: ಏಕಕಾಲಕ್ಕೆ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ – ಅಬ್ಬಬ್ಬಾ.. ಭಯ ಹುಟ್ಟಿಸುತ್ತೆ ವಿಡಿಯೋ!!

1 comment
Elephants Found In Tamilnadu

Elephants Found In Tamilnadu: ಕರ್ನಾಟಕ ತಮಿಳುನಾಡು ಗಡಿ ಭಾಗದ ತಮಿಳುನಾಡು ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಎಲೆ ಹಿಂಡೊಂದು ಎರಡು ದಿನಗಳಿಂದ ಬೀಡುಬಿಟ್ಟಿದೆ(Elephants Found In tamilnadu). ಕಾಡಾನೆಗಳ ಈ ಹಿಂಡಿನಲ್ಲಿ 80ಕ್ಕೂ ಹೆಚ್ಚುಬೀಡು ಬಿಟ್ಟಿದ್ದು ಕಾಡಂಚಿನ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಮುತ್ಯಾಲಮಡುವು ಸಮೀಪದ ಗೌರಮ್ಮನ ಕೆರೆ, ಶೇಷಾದ್ರಿ ಕೆರೆ ಭಾಗಗಳಲ್ಲಿ ಆನೆಗಳ ಸಂಚಾರ ನಡೆಸಿದೆ ಎನ್ನಲಾಗಿದೆ. 25 ಆನೆಗಳ ಒಂದು ಹಿಂಡು, ಮೂರು ಆನೆಗಳ ಮತ್ತೊಂದು ಹಿಂಡು ಮತ್ತು ಒಂಟಿ ಆನೆಯೊಂದು ಆನೇಕಲ್ ಭಾಗದ ಅರಣ್ಯದಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಶಾನಮಾವು, ಬೂದುರು, ಹಳಿಯಾಳ, ರಾಮಾಪುರ, ಬಿರ್ಜೆಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿದ ಆನೆಗಳು ರಾಗಿ, ಭತ್ತ ಮತ್ತು ತೋಟದ ಬೆಳೆ ತುಳಿದು ಹಾನಿ ಮಾಡಿದೆ ಎನ್ನಲಾಗಿದೆ. ಆನೆಗಳು ಗ್ರಾಮಗಳತ್ತ ನುಗ್ಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೊಂಡಿದ್ದಾರೆ.

ಜನರು ಮೇಕೆ, ಕುರಿ, ದನ ಕರು ಮೇಯಿಸಲು ಕಾಡಿಗೆ ಹೋಗಬಾರದು. ಆನೆಗಳನ್ನು ಕೆರಳಿಸುವುದು, ಸೆಲ್ಪಿ ತೆಗೆದುಕೊಳ್ಳುವುದು ಮಾಡಬಾರದು ಎಂದು ಅರಣ್ಯ ಇಲಾಖೆ ಮತ್ತು ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bigg Boss season 10:ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ತನಿಷಾಗೆ ಐ ಲವ್ ಯೂ ಎಂದ ವರ್ತೂರು ಸಂತೋಷ್ !! ತನಿಷಾ ರಿಯಾಕ್ಷನ್ ಹೇಗಿತ್ತು? ಹೇಳಿದ್ದೇನು ?!

You may also like

Leave a Comment