Home » Smile Pinki: ಆಸ್ಕರ್ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ಸರ್ಕಾರ ನೋಟಿಸ್ !! ಕಾರಣವೇನು?

Smile Pinki: ಆಸ್ಕರ್ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ಸರ್ಕಾರ ನೋಟಿಸ್ !! ಕಾರಣವೇನು?

1 comment
Oscar winning smile pinki

Oscar winning smile pinki: ಪಿಂಕಿ ಸೋಂಕರ್ ಜೀವನವನ್ನು ಆಧರಿಸಿದ ಸ್ಮೈಲ್ ಪಿಂಕಿ ಸಾಕ್ಷ್ಯಚಿತ್ರವು 2008 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು (Oscar winning smile pinki) ಗೆದ್ದುಕೊಂಡಿರುವ ವಿಚಾರ ಈಗಾಗಲೇ ನಮಗೆ ತಿಳಿದಿದೆ. ಇದೀಗ ಆಕೆ ಅಕ್ರಮ ಅಸ್ತಿ ಹೊಂದಿರುವ ವಿಚಾರವಾಗಿ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಆಕೆಯ ಮನೆ ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಜೊತೆಗೆ ಆ ಗ್ರಾಮದಲ್ಲಿ ವಾಸಿಸುವ ಸುಮಾರು 30 ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮೂಲತಃ ಪಿಂಕಿ ಮಿರ್ಜಾಪುರ ಜಿಲ್ಲೆಯ ರಾಂಪುರ ಧಾಭಿ ಗ್ರಾಮದ ನಿವಾಸಿ. ಪಿಂಕಿ ಹಾಗೂ ಇತರ ಕೆಲವು ಗ್ರಾಮಸ್ಥರು ಮನೆ ಕಟ್ಟಿಕೊಂಡಿದ್ದ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಪಿಂಕಿಯ ತಂದೆ, ಮನೆ ನಿರ್ಮಾಣ ಮಾಡುವಾಗ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಗ್ರಾಮಸ್ಥರಿಗೆ ಹೇಳಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಿಂಕಿ ಸೋಂಕರ್ ಅವರ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸದ್ಯ ಈ ಕುರಿತು ಮನೆ ಕೆಡಹುವ ಕುರಿತು ನೋಟಿಸ್ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಿರ್ಜಾಪುರ ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ಹೇಳಿದ್ದಾರೆ. ಜೊತೆಗೆ ನ್ಯಾಯಸಮ್ಮತ ಪರಿಹಾರದ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ, ಯಾರಿಗೂ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸವಂತೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶೃಂಗೇರಿ: ವಿಷ ಕುಡಿದು 19ರ ಹುಡುಗಿ ಆತ್ಮಹತ್ಯೆ !! ಕಾರಣವೇನು ?!

You may also like

Leave a Comment