Home » ಜ.20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವಿನ್ ಆಯ್ಕೆ

ಜ.20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವಿನ್ ಆಯ್ಕೆ

0 comments

ಹೊಸದಿಲ್ಲಿ: ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು ಸಕ್ರಿಯರಾಗಿರುವ ನಿತಿ ನವಿನ್‌ ಅವರನ್ನು ಜ.20ರಂದು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿದರುವುದಾಗಿ ವರದಿಯಾಗಿದೆ. ಬಿಹಾರ ಮೂಲಕ 45 ವರ್ಷದ ಹಾಲಿ ಶಾಸಕ ನಿಶಿತ್ ಅವರು ಡಿ.14ರಂದು ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಆಗಿನಿಂದ ಅವರು ಹಾಲಿ ಅಧ್ಯಕ್ಷ .ಪಿ. ನಡ್ಡಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು.

ಅದರ ಅಧಿಕೃತ ಪ್ರಕ್ರಿಯೆಗೆ ಸದ್ಯ ಚಾಲನೆ ನೀಡಲಾಗಿದೆ. ಜ.19 ರಂದು ಬಿಜೆಪಿಯ ಚುನಾವಣಾ ಅಧಿಕಾರಿ ಕೆ.ಲಕ್ಷ್ಮಣ್ ಅವರು ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ನಿತಿನ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲಿದ್ದಾರೆ. 20 ಮಂದಿ ಬಿಜೆಪಿ ರಾಜ್ಯಾಧ್ಯಕ್ಷರ ಬೆಂಬಲವುಳ್ಳ ಪತ್ರವನ್ನು ಕೂಡ ಸಲ್ಲಿಸಲು ಸಿದ್ಧತೆ ನಡೆದಿದೆ. ನಿತಿನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 2020ರ ಜ.20ರಿಂದ ಜೆ.ಪಿ. ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

You may also like