Home » No jeans and T-shirt: ಈ ಸರ್ಕಾರಿ ಕಚೇರಿಯ ನೌಕರರು ಜೀನ್ಸ್ ಟೀ-ಶರ್ಟ್ ಧರಿಸುವಂತಿಲ್ಲ!

No jeans and T-shirt: ಈ ಸರ್ಕಾರಿ ಕಚೇರಿಯ ನೌಕರರು ಜೀನ್ಸ್ ಟೀ-ಶರ್ಟ್ ಧರಿಸುವಂತಿಲ್ಲ!

0 comments
No jeans and T-shirt

No jeans and T-shirt: ಇಲ್ಲೊಂದು ಕಚೇರಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಜೀನ್ಸ್ (jeans) ಹಾಗು ಟೀ- ಶರ್ಟ್ (T-shirt) ಧರಿಸುವುದನ್ನು ನಿಷೇಧಿಸಲಾಗಿದೆ. ಹೌದು, ಬಿಹಾರ ಸರನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕೆಲಸ ಮಾಡುವವವರು ಜೀನ್ಸ್ (jeans) ಹಾಗೂ ಟೀ- ಶರ್ಟ್ (T-shirt) ಹಾಕುವಂತಿಲ್ಲ. ಇಲ್ಲಿನ ಕಚೇರಿಯಲ್ಲಿ ಕೆಲಸದ ವೇಳೆ ಪ್ರತಿ ನೌಕರರು ಕುತ್ತಿಗಿಗೆ ಐಡೆಂಟಿಟಿ ಕಾರ್ಡ್(identity card) ಅನ್ನು ಧರಿಸಬೇಕು. ಕಚೇರಿಯ ಕೆಲಸದ ಅವಧಿಯಲ್ಲಿ ಫಾರ್ಮಲ್ (formals) ಉಡುಗೆಗಳನ್ನು ಹಾಕುವಂತೆ ನೌಕರರಿಗೆ ತಿಳಿಸಲಾಗಿದೆ.

ಇಲಾಖೆ ಅಧಿಕಾರಿಗಳ ನಿರ್ದೇಶನಗಳನ್ನು ಯಾವ ಮಟ್ಟಿಗೆ ಪಾಲಿಸುತ್ತಾರೆ ಎಂದು ನೋಡಲು ಅಧಿಕಾರಿಗಳು ಅಚ್ಚರಿ ಭೇಟಿ ಹಾಗೂ ವೀಡಿಯೋ(video) ಕಾಲೊರೆನ್ಸ್ಗಳನ್ನು ಮಾಡುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದೆ. ಈ ಹೊಸ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವುದಾಗಿ ಮ್ಯಾಜಿಸ್ಟ್ರೇಟ್ ಎಚ್ಚರಿಕೆ ನೀಡಿದೆ. ನಿತೀಶ್ ಕುಮಾರ್ ಸರ್ಕಾರವು ರಾಜ್ಯ ಸರ್ಕಾರ(government) ದ ಕಾರ್ಯದರ್ಶಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸರಳವಾದ, ತೆಳು ಬಣ್ಣದ ಫಾರ್ಮಲ್(formals) ಧರಿಸಿ ಬರುವಂತೆ ಆದೇಶಿಸಿದೆ.

ಕಳೆದ ವರ್ಷ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಯ ಉದ್ಯೋಗಿಗಳು ಜೀನ್ಸ್  ಹಾಗೂ ಟೀ ಶರ್ಟ್ ಧರಿಸುವುದನ್ನು ನಿಷೇಧಿಸಿತ್ತು. 2021 ರಲ್ಲಿಸಿಬಿಐ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಜೀನ್ಸ್  ಹಾಗೂ ಸ್ಪೋರ್ಟ್ಸ್ (sports) ಶೂಗಳನ್ನು ಧರಿಸುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಆದೇಶ ನೀಡಿದ್ದರು.

ಇದನ್ನೂ ಓದಿ: Viral video: ಕುದುರೆ ಏರಿ ಬಂದ, ದರೋಡೆ ಮಾಡಿ ಹೋದ! ವೀಡಿಯೋ ವೈರಲ್!!!

You may also like

Leave a Comment