Pan Aadhaar Link Free: ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (pan – aadhaar link ) ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹಾಗೇ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ಸಾಕಷ್ಟು ಜನರ ಲಿಂಕ್ ಕಾರ್ಯ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಇದರ ಗಡುವನ್ನು ಜೂನ್ 30ಕ್ಕೆ ಮುಂದೂಡಲಾಗಿತ್ತು. ಇದೀಗ ಪಾನ್ ಆಧಾರ್ ಲಿಂಕ್ ಬಗ್ಗೆ ಹೊಸ ಅಪ್ಡೇಟ್ ಬಂದಿದ್ದು, ಇನ್ನು 3 ತಿಂಗಳು ಮಹಿಳೆಯರಿಗೆ ಮಾತ್ರ ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು (Pan Aadhaar Link Free) ಅಂತ ಹೇಳಲಾಗುತ್ತಿದೆ.
ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (pan – aadhaar link ) ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಜನರು ತೊಂದರೆ ಎದುರಿಸುತ್ತಿದ್ದರು. ಇದರಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದು, ಇದನ್ನು ಮನಗೊಂಡ ಸರ್ಕಾರ ಇನ್ನೂ 3 ತಿಂಗಳು ಕಾಲ ಸಮಯ ನೀಡಿದೆ.
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.
ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ, ಇನ್ನು 3 ತಿಂಗಳು ಮಹಿಳೆಯರಿಗೆ (women) ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಎಂಬ ಹೇಳಿಕೆಯ ಪೋಸ್ಟ್, ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಇದು ಸುಳ್ಳು ಸುದ್ದಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ (central government) ಮಾಹಿತಿ ನೀಡಿದೆ.
“ ಕೇಂದ್ರ ಸರ್ಕಾರ ಪ್ಯಾನ್- ಆಧಾರ್ ಕಾರ್ಡ್ ಮಾಡಿಸಲು ಯಾವುದೇ ವಿನಾಯ್ತಿ ನೀಡಿಲ್ಲ. 1000 ರೂಪಾಯಿ ದಂಡ ಕಟ್ಟಿ ಲಿಂಕ್ ಮಾಡಿಸಬೇಕು. ಮಹಿಳೆಯರು ದಂಡ ಕಟ್ಟದೆ ಉಚಿತ ಪ್ಯಾನ್ ಆಧಾರ್ ಲಿಂಕ್ ಮಾಡಿಸಬಹುದು ಎನ್ನುವುದು ಸುಳ್ಳುಸುದ್ದಿ, ಈ ರೀತಿಯ ಸುದ್ದಿಯನ್ನು ನಂಬಬೇಡಿ” ಎಂದು ಕೇಂದ್ರ ಸರ್ಕಾರ ಹೇಳಿದೆ.
