ಇತ್ತೀಚಿಗೆ ಚುನಾವಣೆಯೆಂದರೆ ಹಣದಾಸೆಗೆ ಮತ ಹಾಕುವುದು ಎಂದೇ ಹೇಳಬಹುದು. ಅಭ್ಯರ್ಥಿ ಎಂಥವನೇ ಆಗಿರಲಿ ಹಣ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತು ನೀಡಿದರೆ ಸಾಕು ಸಲೀಸಾಗಿ ತನ್ನ ತೆಕ್ಕೆಗೆ ಮತ ಬೀಳುತ್ತದೆ. ಹಾಗೆಯೇ ಇಲ್ಲೊಬ್ಬ ಜನನಾಯಕ ತನಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಏನು ಮಾಡಿದ್ದಾನೆ ಗೊತ್ತಾ??
ಜನನಾಯಕನೊಬ್ಬ ತನಗೆ ಮತಹಾಕಲಿಲ್ಲ ಎಂಬ ಕಾರಣಕ್ಕೆ ತಾನು ಉಗುಳಿದ್ದನ್ನು ತಿನ್ನುವಂತೆ ಯುವಕನೊಬ್ಬನಿಗೆ ಒತ್ತಾಯಿಸಿರುವ ಅಮಾನವೀಯ ಘಟನೆ ಬಿಹಾರದ ಔರಂಗಾಬಾದ್‍ನಲ್ಲಿ ನಡೆದಿದೆ.
ಅಭ್ಯರ್ಥಿ ಬಲವಂತ್ ಕುಮಾರ್ ಸೋಲಿನ ಬಳಿಕ ಇಬ್ಬರು ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್‍ಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಒಳಿಕ ನೆಲದ ಮೇಲೆ ಉಗುಳಿದನ್ನು ಒತ್ತಾಯಿಸಿ ತಿನ್ನಿದ್ದಾನೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರು ಅಂಬಾ ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗಿದೆ.
ಆರೋಪಿ ಮುಖಂಡ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಇದೀಗ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗುವುದಾಗಿ ಎಂದು ಎಸ್ಪಿ ಕಾಂತೇಶ್ ಮಿಶ್ರಾ ತಿಳಿಸಿದ್ದಾರೆ.
ಇಂತಹ ಅಮಾನವೀಯ ವ್ಯಕ್ತಿ ಜನನಾಯಕನ ಆಗಲು ಹೇಗೆ ಸಾಧ್ಯ, ಈ ರೀತಿಯ ಮನಸ್ಥಿತಿಯ ವ್ಯಕ್ತಿಗಳು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸಬಾರದು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
