Lottery Ticket Winner: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ (Money)ಮಾಡಬೇಕು, ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ.ಆದ್ರೆ, ಅದೃಷ್ಟ ಲಕ್ಷ್ಮೀ ಸುಲಭವಾಗಿ ಎಲ್ಲರ ಕೈ ಹಿಡಿಯುವುದಿಲ್ಲ. ನಸೀಬು ಚೆನ್ನಾಗಿದ್ದರೆ ಮಾತ್ರ ಅದೃಷ್ಟದ(Luck)ಬಾಗಿಲು ತೆರೆದುಕೊಳ್ಳುತ್ತದೆ. ಅದಕ್ಕೆ ನಿದರ್ಶನ ಅನ್ನೋ ಹಾಗೆ ಇಂಟ್ರೆಸ್ಟಿಂಗ್ ಕಹಾನಿಯೊಂದು (Intresting Story)ವರದಿಯಾಗಿದೆ.
ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಪಂಜಾಬಿನ ಹೋಶಿಯಾರ್‌ಪುರದಲ್ಲಿ ರೈತರೊಬ್ಬರು (Farmer)ಮಹಿಲ್‌ಪುರದಿಂದ ಹೋಶಿಯಾರ್‌ಪುರಕ್ಕೆ ಔಷಧಿ ಖರೀದಿಸಲು ಬರುತ್ತಿದ್ದರಂತೆ. ಇದೇ ರೀತಿ, ನವೆಂಬರ್ 4ರಂದು ಕೂಡ ಔಷಧಿ ಖರೀದಿ ಮಾಡಲು ಹೋಗಿದ್ದಾರೆ. ಔಷಧಿ ಖರೀದಿಸಿ, ಬಳಿಕ ಪ್ರತಿ ಬಾರಿಯಂತೆ ಅಗರ್ವಾಲ್ ಲಾಟರಿ ಸ್ಟಾಲ್ ಹೋಶಿಯಾರಪುರದಿಂದ ಲಾಟರಿ ಖರೀದಿ (Lottery Ticket)ಮಾಡಿದ್ದಾರಂತೆ.
ಲಾಟರಿ ಟಿಕೆಟ್ ಖರೀದಿಸಿ ಮನೆಗೆ ತೆರಳಿದ್ದ ರೈತನಿಗೆ ಸಂಜೆ ಏಳು ಗಂಟೆ ಸುಮಾರಿಗೆ ಲಾಟರಿ ಸ್ಟಾಲ್ ಮಾಲೀಕ ಅಗರ್ವಾಲ್ ಅವರು ಕರೆ ಮಾಡಿ ಸಿಹಿ ಸುದ್ದಿ ನೀಡಿದ್ದಾರೆ. ರೈತ ಸಂಜೆ ಖರೀದಿ ಮಾಡಿದ ಲಾಟರಿ ಟಿಕೇಟ್ ನಿಂದ 2.5 ಕೋಟಿ ರೂಪಾಯಿ ಲಾಟರಿ ಹೊಡೆದಿರುವುದಾಗಿ(Lottery Ticket Winner) ಲಾಟರಿ ಮಾಲೀಕ ತಿಳಿಸಿದ್ದಾರೆ. ಲಾಟರಿ ಗೆದ್ದ ರೈತ ಕುಟುಂಬ ಸದಸ್ಯರ ಸಲಹೆ ಪಡೆದು ಗೆದ್ದ ಹಣವನ್ನು ಬಳಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Puttur :ದಿಢೀರ್ ಅಸ್ವಸ್ಥತೆಗೊಂಡ ನವವಿವಾಹಿತೆ ಸಾವು!!!
