Indian Railway : ಭಾರತೀಯ ರೈಲ್ವೆ ಇಲಾಖೆಯ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು ‘ಟಿಕೆಟ್ ಕನ್ಫರ್ಮ್’ ಕುರಿತು ಹೊಸ ನಿಯಮವನ್ನು ಜಾರಿಗೊಳಿಸಿದೆ.
ಹೌದು, ಇದುವರೆಗೂ ಬುಕ್ ಮಾಡಿದ ಟಿಕೆಟ್ ಕನ್ಫರ್ಮೇಶನ್ ಬಗ್ಗೆ ರೈಲ್ವೆ ಇಲಾಖೆಯು ಪ್ರಯಾಣದ ದಿನ ಮಾಹಿತಿಯನ್ನು ನೀಡುತ್ತಿತ್ತು. ಅಂದರೆ ರೈಲು ಹೊರಡುವ ನಾಲ್ಕು ಗಂಟೆ ಮುಂಚಿತವಾಗಿ ಟಿಕೆಟ್ ಕನ್ಫರ್ಮೇಶನ್ ಕುರಿತು ಮಾಹಿತಿ ಬರುತ್ತಿತ್ತು. ಆದರೆ ಇದೀಗ 10:00 ಮುಂಚಿತವಾಗಿ ಪ್ರಯಾಣಿಕರಿಗೆ ಟಿಕೆಟ್ ಕನ್ಫರ್ಮ್ ಮಾಹಿತಿ ಬರಲಿದೆ.
ರೈಲ್ವೆ ಇಲಾಖೆಯ ಪ್ರಕಾರ, ಬೆಳಿಗ್ಗೆ 5:01 ರಿಂದ ಮಧ್ಯಾಹ್ನ 2:00 ರವರೆಗೆ ಚಲಿಸುವ ರೈಲುಗಳಿಗೆ ಮೊದಲ ಮೀಸಲಾತಿ ಪಟ್ಟಿಯನ್ನು ಹಿಂದಿನ ದಿನ ರಾತ್ರಿ 8 ಗಂಟೆಯೊಳಗೆ ಸಿದ್ಧಪಡಿಸಲಾಗುತ್ತದೆ. ರೈಲು ಪ್ರಯಾಣಿಕರು ತಮ್ಮ ಟಿಕೆಟ್ ದೃಢೀಕರಣ ಮಾಹಿತಿಯನ್ನು ಬಹಳ ಮೊದಲೇ ತಿಳಿದುಕೊಳ್ಳಬಹುದು. ಇದರಿಂದ ಅವರಿಗೆ ನಿಲ್ದಾಣ ತಲುಪಲು ಸಾಕಷ್ಟು ಸಮಯ ಸಿಗುತ್ತದೆ. ಮಧ್ಯಾಹ್ನ 2:01 ರಿಂದ ರಾತ್ರಿ 11:59 ರವರೆಗೆ ಮತ್ತು ಬೆಳಿಗ್ಗೆ 12:00 ರಿಂದ ಬೆಳಿಗ್ಗೆ 5:00 ರವರೆಗೆ ಚಲಿಸುವ ರೈಲುಗಳಿಗೆ ಮೊದಲ ಮೀಸಲಾತಿ ಪಟ್ಟಿಯನ್ನು ಕನಿಷ್ಠ 10 ಗಂಟೆಗಳ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ. ಈ ನಿರ್ಧಾರವು ದೂರದ ಸ್ಥಳಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಉಪಯುಕ್ತವಾಗಲಿದೆ.
