Home » RBI MPC Meeting: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ?!

RBI MPC Meeting: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ?!

0 comments
RBI MPC Meeting

RBI MPC Meeting: ಈ ಹಿಂದೆ RBI ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೋ ದರ (repo rate) ಹೆಚ್ಚಿಸಿತ್ತು. ಇದೀಗ ರೆಪೋ ದರದಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಏಪ್ರಿಲ್ 3ರಿಂದ (ಇಂದು) ಆರ್‌ಬಿಐನ ಹಣಕಾಸು ನೀತಿ ಸಭೆ ಆರಂಭವಾಗಲಿದ್ದು, ಸಭೆಯಲ್ಲಿ (RBI MPC Meeting) ಮತ್ತೊಮ್ಮೆ ರೆಪೋ ದರ ಹೆಚ್ಚಳವಾಗುವ ಸಾಧ್ಯತೆಯಿದ್ದು, ಇದರ ಪರಿಣಾಮ ಮನೆಯ ಇಎಂಐ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ವಿತ್ತೀಯ ಪರಾಮರ್ಶೆಯಲ್ಲಿ ರೆಪೊ ದರವನ್ನು ಮತ್ತೊಮ್ಮೆ ಶೇಕಡಾ 0.25 ರಷ್ಟು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ಸಭೆ ಬಳಿಕ ಮಾಹಿತಿ ತಿಳಿಯಲಿದೆ.

ಇಂದಿನಿಂದ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ (RBI MPC) ದ್ವೈಮಾಸಿಕ ಪರಿಶೀಲನಾ ಸಭೆಯು ಆರಂಭವಾಗಲಿದ್ದು, ಎಪ್ರಿಲ್ 6 ರಂದು ನೀತಿ ದರದ ನಿರ್ಧಾರದೊಂದಿಗೆ ಕೊನೆಗೊಳ್ಳಲಿದೆ.
ಇದು ಸಭೆಯು ಮೇ 2022 ರಲ್ಲಿ ಪ್ರಾರಂಭವಾದ ಬಡ್ಡಿದರ ಹೆಚ್ಚಳದ ಚಕ್ರದಲ್ಲಿ ಕೊನೆಯ ಏರಿಕೆಯಾಗಿರಬಹುದು ಎನ್ನಲಾಗಿದೆ.

ಆರ್ ಬಿಐ ಕಳೆದ ಮೇ 2022 ರಿಂದ ನಿರಂತರವಾಗಿ ಬಡ್ಡಿದರ ಹೆಚ್ಚಿಸಿದ್ದು, ಈ ವೇಳೆ ರೆಪೋ ದರವು ನಾಲ್ಕು ಪ್ರತಿಶತದಿಂದ 6.50 ಪ್ರತಿಶತಕ್ಕೆ ಏರಿದೆ. ಅಲ್ಲದೆ, ಕಳೆದ ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಶೇ.0.25ರಷ್ಟು ರೆಪೋ ದರ ಹೆಚ್ಚಿಸಲಾಗಿತ್ತು. ಎಂಪಿಸಿ ಸಭೆಯಲ್ಲಿ, ವಿತ್ತೀಯ ನೀತಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ.

ಬ್ಯಾಂಕ್ ಆಫ್ ಬರೋಡಾದ (bank of baroda) ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಅವರು, 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ, ಆರ್‌ಬಿಐ ಒಟ್ಟು ಆರು ಎಂಪಿಸಿ ಸಭೆಗಳನ್ನು ಆಯೋಜಿಸುತ್ತದೆ. ಕಳೆದ ಎರಡು ತಿಂಗಳಿನಿಂದ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚು ಉಳಿದಿದೆ ಮತ್ತು ದ್ರವ್ಯತೆ ಈಗ ಬಹುತೇಕ ತಟಸ್ಥವಾಗಿದೆ, ಆರ್‌ಬಿಐ ಮತ್ತೊಮ್ಮೆ ರೆಪೋ ದರವನ್ನು ಶೇಕಡಾ 0.25 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಹಾಗೇ, RBI ದರ ಏರಿಕೆಯ ಹಂತವು ಮುಗಿದಿದೆ ಎಂದು ಸೂಚಿಸಬಹುದು ಎಂದು ಹೇಳಿದ್ದಾರೆ.

You may also like

Leave a Comment