Shimoga: ಸಕ್ರೆಬೈಲು ಆನೆ ಬಿಡಾರದ ತುಂಬು ಗರ್ಭಿಣಿ ಭಾನುಮತಿಗೆ ಹಲ್ಲೆಯಾಗಿರುವ ಘಟನೆಯೊಂದು ನಡೆದಿದೆ. ಆನೆಯ ಬಾಲ ತುಂಡಾಗುವಷ್ಟು ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ನಿಜಕ್ಕೂ ಖೇದಕರ ಸಂಗತಿ ಎಂದೇ ಹೇಳಬಹುದು. ಭಾನುಮತಿ ಆನೆ ತುಂಬು ಗರ್ಭಿಣಿಯಾಗಿದ್ದು, ಈ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ (Shimoga).
ಈ ಆನೆಯನ್ನು ನೋಡಿಕೊಳ್ಳುವ ಸಿಬ್ಬಂದಿಗಳು ಬಂದಾಗ ಈ ಘಟನೆಗೆ ಬೆಳಕಿಗೆ ಬಂದಿದೆ. ಹದಿನೆಂಟು ತಿಂಗಳ ಗರ್ಭಿಣಿಯಾಗಿರುವ ಭಾನುಮತಿಯನ್ನು ಮಾವುತ, ಕಾವಾಡಿಗಳು ಆರೈಕೆ ಮಾಡಿ, ಆಹಾರ ನೀಡಿ ಬಂದಿದ್ದರು. ಆದರೆ ಸೋಮವಾರ ಬೆಳಗ್ಗೆ ಭಾನುಮತಿಯನ್ನು ನೋಡಲು ಹೋದಾಗ ಸಿಬ್ಬಂದಿಗಳಿಗೆ ಅಲ್ಲಲ್ಲಿ ರಕ್ತ ಕಂಡು ಬಂದಿದೆ. ಮರಿ ಹಾಕಿರಬಹುದು ಎಂದು ಖುಷಿಯಿಂದ ಹೋದ ಸಿಬ್ಬಂದಿಗಳಿಗೆ ಶಾಕ್ ಆಗಿದೆ.
ಭಾನುಮತಿ ಆನೆಯ ಬಾಲಕ್ಕೆ ಯಾರೋ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಚರ್ಮ ಬಾಲಕ್ಕೆ ಅಂಟಿಕೊಂಡಿದ್ದು ಬಿಟ್ಟರೆ ಬಾಲ ಬಹುತೇಕ ತಂಡಾಗಿದೆ. ಅನಂತರ ಆನೆಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದ್ದು, ಭಾನುಮತಿಯಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: LPG Gas Cylinder: ದೀಪಾವಳಿಗೆ ಜನರಿಗೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರಕಾರದಿಂದ ಮಹತ್ವದ ಘೋಷಣೆ
