Home » Smartphone ಖರೀದಿ ಮಾಡಿ, ಬಿಯರ್‌ ಉಚಿತವಾಗಿ ಪಡೆದುಕೊಳ್ಳಿ! ಆಫರ್‌ ಕೊಟ್ಟವ ನಂತರ ಏನಾದ?

Smartphone ಖರೀದಿ ಮಾಡಿ, ಬಿಯರ್‌ ಉಚಿತವಾಗಿ ಪಡೆದುಕೊಳ್ಳಿ! ಆಫರ್‌ ಕೊಟ್ಟವ ನಂತರ ಏನಾದ?

0 comments

Special Offer: ಎಣ್ಣೆ ಪ್ರಿಯರೇ ಗಮನಿಸಿ, ನಿಮಗೊಂದು ಬಂಪರ್ ಸಿಹಿ ಸುದ್ದಿ ಎದುರು ನೋಡುತ್ತಿದೆ. ಅದೇನು ಅಂತೀರಾ? ಹಾಗಿದ್ರೆ ನೀವು ಈ ಇಂಟರೆಸ್ಟಿಂಗ್ ವಿಷಯ ತಿಳಿದುಕೊಳ್ಳೋದು ಒಳ್ಳೆಯದು. ಏನು ಆಫರ್ ಅಂತೀರಾ? ಬೈ ವನ್ ಗೆಟ್ ವನ್ ಫ್ರೀ ( Buy One Get One Free) ಅನ್ನೋ ಹಾಗೇ ಯಾರಿಗುಂಟು ಯಾರಿಗಿಲ್ಲ ಎಂಬಂತಹ ಆಫರ್ (Special Offer)ಇದೆ.

ಹಾಗಿದ್ರೆ ಆಫರ್ ಏನು ಎಂದು ನೋಡಿದರೆ, ಸ್ಮಾರ್ಟ್ ಫೋನ್(Smarthphones) ಖರೀದಿ ಮಾಡಿದರೆ ಎರಡು ಬಿಯರ್ ಕ್ಯಾನ್ (Drinks)ಉಚಿತವಾಗಿ(Special Offer) ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ರೀತಿ ಆಫರ್ ನೀಡಿರುವುದು ಉತ್ತರಪ್ರದೇಶದ (Uttar pradesh) ಭದೋಹಿಯಲ್ಲಿ ನಡೆದಿದೆ.

ಚೌರಿ ರಸ್ತೆ ಸನಿಹದಲ್ಲಿದ್ದ ಮೊಬೈಲ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬಾತ ತನ್ನ ಶೋರೂಂನಲ್ಲಿ ಮಾರ್ಚ್ 3ರಿಂದ 7ರವರೆಗೆ ಆ್ಯಂಡ್ಯಾಯ್ಡ್ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್ಸ್ಸ್, ಕರಪತ್ರದ ಮೂಲಕ ಪ್ರಚಾರ ನೀಡಿದ್ದಾನೆ. ಹೀಗಾಗಿ, ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ (Android smartphone) ಕೊಂಡು ಕೊಂಡರೆ ಉಚಿತವಾಗಿ ಎರಡು ಕ್ಯಾನ್ ಬಿಯರ್ ಪಡೆಯಿರಿ ಎಂಬ ಸುದ್ದಿ ಎಲ್ಲೆಡೆ ವೈರಲ್( viral) ಆಗಿದ್ದು, ಸಾಗರೋಪಾತಿಯಲ್ಲಿ ಜನರು ಮೊಬೈಲ್ ಶೋರೂಂಗೆ (Mobile Showroom)ಲಗ್ಗೆ ಇಟ್ಟು ಮೊಬೈಲ್ ಕೊಂಡುಕೊಳ್ಳಲು ಮುಗಿ ಬಿದ್ದಿದ್ದಾರೆ.

ಒಂದಕ್ಕೊಂದು ಆಫರ್ ಘೋಷಿಸಿದ ಹಿನ್ನೆಲೆ ಇನ್ನೂ ಎಣ್ಣೆ ಫ್ರೀ ಸಿಗುತ್ತೆ ಅಂದರೆ ಕೇಳಬೇಕಾ? ಜನರು ಹೇಗೆ ಸೇರುತ್ತಾರೆ ಎಂದು ನೀವೇ ಊಹಿಸಿಕೊಳ್ಳಿ. ಹೀಗಾಗಿ, ಭಾರಿ ಪ್ರಮಾಣದಲ್ಲಿ ಜನರು ಶೋ ರೂಂ ಎದುರು ಸೇರಿದ್ದು, ಸಾರ್ವಜನಿಕ ಶಾಂತಿ ಹಿತ ಕದಡಿದ ಆರೋಪದ ಮೇರೆಗೆ ಅಂಗಡಿ ಮಾಲೀಕನನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರು ಆರೋಪಿಯು ಮೊಬೈಲ್ ಶೋರೂಂ ಅನ್ನು ಸೀಲ್ ಮಾಡಿಸಿದ್ದು, ಶೋರೂಂ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ವರದಿಯಾಗಿದೆ.

You may also like

Leave a Comment