1
ನವದೆಹಲಿ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಸುಪ್ರೀಂ ಕೋರ್ಟಿನ 49ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ನ್ಯಾಯಾಧೀಶರಾದ ಎಸ್.ವಿ ರಮಣ್ ಅವರು ಇದೇ ತಿಂಗಳ 26ರಂದು ನಿವೃತ್ತಿ ಹೊಂದಲಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಯು.ಯು.ಲಲಿತ್ ಅವರನ್ನು ಆರಿಸಲಾಗಿದೆ. ಆಗಸ್ಟ್ 27ರಿಂದ ಸುಪ್ರೀಂ ಕೋರ್ಟಿನ ಚುಕ್ಕಾಣಿಯನ್ನು ಯು.ಯು.ಲಲಿತ್ ಹಿಡಿಯಲಿದ್ದಾರೆ.
ಈ ವರ್ಷದ ನವೆಂಬರ್ 8ರವರೆಗೆ ಇವರು ಅಧಿಕಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
