Fevikwik : ಗಾಯ(Injury) ಗೊಂಡು ಆಸ್ಪತ್ರೆಗೆ ಬಂದಿದ್ದ ಬಾಲಕನಿಗೆ ಔಷಧಿ ಹಾಕಿ, ಹೊಲಿಗೆ ಹಾಕೋದು ಬಿಟ್ಟು, ಫೆವಿಕ್ವಿಕ್(Fevikwik) ಹಾಕಿ ಕಳಿಸಿದ ಅಮಾನವೀಯ ಘಟನೆಯೊಂದು ನಡೆದಿದ್ದು ವೈದ್ಯನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು, ತೆಲಂಗಾಣದ(Telangana) ಜೋಗುಲಾಂಬ ಗದ್ವಾಲಾ(Jogulamba Gadvala) ಜಿಲ್ಲೆಯ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ, ತಲೆಗೆ ಗಂಭೀರವಾಗಿ ಗಾಯ ಮಾಡಿಕೊಂಡು ಚಿಕಿತ್ಸೆಗೆಂದು ತನ್ನ ಬಳಿ ಬಂದ ಮಗುವಿನ ತಲೆಗೆ ಚಿಕಿತ್ಸೆ ನೀಡಿ ಹೊಲಿಗೆ ಹಾಕದೆ ಫೆವಿಕ್ವಿಕ್ ಹಾಕಿದ ಘಟನೆ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಇದರ ಬೆನ್ನಲ್ಲಿಯೇ ಬಾಲಕನ ತಂದೆ-ತಾಯಿ ವೈದ್ಯನ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಅಂದಹಾಗೆ ರಾಯಚೂರು(Rayachur) ಜಿಲ್ಲೆಯ ಲಿಂಗಸೂಗೂರಿನ(Lingasure) ವಂಶಿಕೃಷ್ಣ(Vamsha Krishna) ಮತ್ತು ಸುನೀತಾ(Suneeta) ದಂಪತಿಗಳು ತಮ್ಮ ಏಳು ವರ್ಷದ ಮಗ ಪ್ರವೀಣ್ ಚೌಧರಿಯನ್ನು ಆಸ್ಪತ್ರೆಗೆ (Hospital) ಕರೆದುಕೊಂಡು ಬಂದಿದ್ದರು. ಬಾಲಕ ಪ್ರವೀಣ್ ಸಂಬಂಧಿಕರ ಮದುವೆಯ (Marriage) ಸಂದರ್ಭದಲ್ಲಿ ಹೊರಗೆ ಆಟವಾಡುತ್ತಿದ್ದಾಗ ಗಾಯಗೊಂಡಿದ್ದ. ಬಾಲಕನ ಎಡಗಣ್ಣಿನ ಮೇಲೆ ಆಳವಾದ ಗಾಯವಾಗಿತ್ತು. ಹೀಗಾಗಿ ಸ್ಟಿಚಸ್ ಹಾಕಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಡಾ.ನಾಗಾರ್ಜುನ ಹಾಗೂ ಅವರ ತಂಡವು ಚಿಕಿತ್ಸೆ ನೀಡಿತ್ತು. ಆದರೆ, ಅವರು ಈ ಹಂತದಲ್ಲಿ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅನ್ನು ಬಳಸಿದ್ದಾರೆ.
ಫೆವಿಕ್ವಿಕ್ ಬಳಸಿದ ಬೆನ್ನಲ್ಲಿಯೇ ನೋವು ಇನ್ನಷ್ಟು ತೀವ್ರವಾಗಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡಿಸಿತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಸಹ ಪೋಷಕರಿಗೆ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ. ಅಲ್ಲದೆ ಬೇರೆ ವೈದ್ಯರಿಗೆ ಸಂಪರ್ಕ ಮಾಡುವಂತೆ ಹೇಳಲಾಗಿದೆ. ಆದರೆ ಆ ಕೂಡಲೇ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಲ್ಲದೆ ವೈರಲ್ ಆಗಿರುವ ವೀಡಿಯೊದಲ್ಲಿ, ಪೋಷಕರು ತಮ್ಮ ನಿರ್ಲಕ್ಷ್ಯದ ಬಗ್ಗೆ ವೈದ್ಯರು ಮತ್ತು ಅವರ ಸಹಾಯಕರನ್ನು ವಿರುದ್ಧ ಕೂಗಾಡುತ್ತಿರುವುದು ಕಂಡಿದೆ. ಈ ವಿಡಿಯೋದಲ್ಲಿ ವೈದ್ಯ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿದ್ಯುತ್ ಸಮಸ್ಯೆ ಆಗಿದ್ದ ಕಾರಣಕ್ಕೆ ಈ ಅವಗಢ ಸಂಭವಿಸಿದೆ ಎಂದು ಹೇಳಿದ್ದಾರೆ. ಜೊತೆಗೆ ಅವರು ಪೋಷಕರನ್ನು ಶಾಂತಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಿ ಆತನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ವೈದ್ಯನ ವೈದ್ಯಕೀಯ ಅರ್ಹತೆಯನ್ನು ಪ್ರಶ್ನೆ ಮಾಡಿದಾಗ ವೈದ್ಯ ಕೂಡ ಕೋಪಗೊಂಡ ಘಟನೆ ನಡೆದಿದೆ.
ಸಾಮಾನ್ಯವಾಗಿ ಗಾಯವಾದರೆ ಕ್ಲೀನ್ ಮಾಡಿ ಬ್ಯಾಂಡೇಜ್ ಹಾಕಲಾಗುತ್ತದೆ. ಗಾಯ ಇನ್ನೂ ಸ್ಪಲ್ಪ ಆಳವಾಗಿ ಆಗಿದ್ದರೆ ಸ್ಟಿಚಸ್ ಹಾಕುತ್ತಾರೆ. ಗಾಯವನ್ನು ಗುಣಪಡಿಸಲು ವೈದ್ಯರು ಔಷಧಗಳು (Medicine) ಅಥವಾ ಮುಲಾಮುಗಳನ್ನು ಹಚ್ಚುತ್ತಾರೆ. ಅಥವಾ ಗಾಯ ಇನ್ನೂ ದೊಡ್ಡದು ಎಂದಾದರೆ ಹೊಲಿಗೆ ಹಾಕಬೇಕಾಗುತ್ತದೆ. ಆದರೆ ಈ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮಾಡಿದ್ದೇ ಬೇರೆ. ಬಾಲಕನಿಗೆ ಆ ಆಸ್ಪತ್ರೆ ನೀಡಿದ ಚಿಕಿತ್ಸೆ (Treatment) ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
