Traffic rule violators: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ವಾಹನಗಳನ್ನು ಸಂಚಾರ ಮಾಡುವ ಸವಾರರಿಗೆ ರೂಲ್ಸ್ ಬಿಸಿ ತಟ್ಟಲಿದ್ದು, ಕೊಂಚ ಹೊಸ ಟ್ರಾಫಿಕ್ ನಿಯಮಗಳನ್ನು ಗಮನಿಸುವುದು ಸೂಕ್ತ. ಅರೇ, ಏನಾಪ್ಪ ನಿಯಮ ಅಂತಾ ಯೋಚನೆ ಮಾಡ್ತಿದ್ದೀರಾ? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ..
ಸಿಟಿಯಲ್ಲಿ ವಾಹನ ಓಡಿಸೋದು ಅಂದ್ರೆನೇ ಅದೇಷ್ಟೋ ಜನರಿಗೆ ತಲೆನೋವು. ಅದರಲ್ಲೂ ಕೆಲಸ ಒತ್ತಡಕ್ಕೆ ಮಣಿದು ಸಿಗ್ನಲ್ ಜಂಪ್ ಮಾಡುವುದು, ಎಲ್ಲೆಂದರಲ್ಲಿ ಪಾರ್ಕಿಂಗ್ ಹೀಗೆ ಹತ್ತಾರು ನಿಯಮವನ್ನು ಉಲ್ಲಂಘನೆ ಮಾಡುವುದನ್ನು ಗಮನಿಸಿರಬಹುದು. ಅದರಲ್ಲೂ ಇತ್ತೀಚಿನ ಕಾಲ ಘಟ್ಟದಲ್ಲಿ ಬೈಕ್ ಅಥವಾ ಕಾರುಗಳು ಒನ್ ವೇನಲ್ಲಿ ಸಂಚಾರಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಈ ನಿಟ್ಟಿನಲ್ಲಿ ಇನ್ಮುಂದೆ ರಸ್ತೆಯಲ್ಲಿ ವಾಹನ ಪಾರ್ಕಿಂಗ್, ಒನ್ ವೇನಲ್ಲಿ ಸಂಚಾರ, ಫುಟ್ಬಾತ್ ಮೇಲೆ ವಾಹನ ಚಾಲನೆ ಮಾಡಿದರೇ ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗುತ್ತದೆ, ಜತೆಗೆ ವಾಹನ ಸೀಜ್ ಮಾಡಲಾಗುತ್ತದೆ ಎಂಬ ಹೊಸ ರೂಲ್ಸ್ (Traffic rule violators) ಜಾರಿಗೆ ತರಲಾಗಿದೆ. ಇದರಿಂದಾಗಿ ಸಿಟಿಯಲ್ಲಿ ಓಡಾಡೋ ವಾಹನ ಸವಾರರು ಎಚ್ಚರ ವಹಿಸೋದು ಅತ್ಯಗತ್ಯ ಸ್ವಲ್ಪ ಯಾಮಾರಿದ್ರೂ, ಕ್ರಿಮಿನಲ್ ಕೇಸ್ ದಾಖಲಾಗುವುದು ಗ್ಯಾರಂಟಿ.
ಇದನ್ನೂ ಓದಿ: Kerala Highcourt: ತನ್ನ ಮಕ್ಕಳೆದುರು ನಗ್ನಳಾಗಿ ನಿಂತು ಚಿತ್ರ ಬಿಡಿಸಲು ಹೇಳಿದ ಮಹಿಳೆ: ಹೈಕೋರ್ಟು ನೀಡಿದ ತೀರ್ಪೇನು?
