Lucknow: ರಾಜಭವನದ ಎದುರಿನಲ್ಲೇ ಮಹಿಳೆಯೊಬ್ಬರು ಹೆರಿಗೆ ಆಗಿ ತಲ್ಲಣ ಉಂಟುಮಾಡಿದೆ. ಘಟನೆ ನಡೆದಿದೆ. ರಾಜಭವನದ ಎದುರು ರಸ್ತೆಬದಿಯಲ್ಲೇ ಮಹಿಳೆಯೊಬ್ಬರ ಹೆರಿಗೆ ಆಗಿದ್ದು, ಆರೋಗ್ಯ ಕ್ಷೇತ್ರದ ಅವ್ಯವಸ್ಥೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉತ್ತರಪ್ರದೇಶದ ಲಕ್ನೋದಲ್ಲಿನ( Lucknow) ರಾಜಭವನದ ಎದುರು ಆಗಸ್ಟ 13 ರಂದು ಈ ಘಟನೆ ನಡೆದಿದೆ.
ಆ ನಾಲ್ಕೂವರೆ ತಿಂಗಳ ಗರ್ಭಿಣಿಗೆ ರಸ್ತೆ ಬದಿಯಲ್ಲೇ ಹೆರಿಗೆ ಆಗಿದೆ. ಅವಧಿ ಪೂರ್ವ ಹೆರಿಗೆಯಾದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆ ಗಂಡುಮಗು ತೀರಿಕೊಂಡಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಯುಪಿ ಮುಖ್ಯಮಂತ್ರಿ, ಆರೋಗ್ಯ ಸಚಿವ ಆಗಿರುವ ಬ್ರಜೇಶ್ ಪಾಠಕ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ. ರಾಜಭವನದ ಗೇಟ್ ರ ಬಳಿ ಈ ಘಟನೆ ನಡೆದಿರುವುದು ನಿಜ, ಈ ಘಟನೆಯ ಕುರಿತು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಆ ಗರ್ಭಿಣಿ ಮಹಿಳೆಯು ಶನಿವಾರ ಬೆಳಗ್ಗೆ ಲಕ್ನೋದ ಶ್ಯಾಮ್ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಆಕೆಗೆ ನೋವು ನಿವಾರಕ ಇಂಜೆಕ್ಷನ್ ನೀಡಲಾಗಿದ್ದು, ಬಳಿಕ ಆಕೆಯನ್ನು ಮನೆಗೆ ಕಳಿಸಲಾಗಿತ್ತು. ಇಂಜೆಕ್ಷನ್ ತೆಗೆದುಕೊಂಡರೂ ನೋವು ಕಡಿಮೆ ಆಗದ್ದರಿಂದ ಆಕೆ ಮತ್ತೆ ಆಸ್ಪತ್ರೆ ಕಡೆ ಮರಳಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಮಾರ್ಗಮಧ್ಯೆಯೇ ಆಕೆಗೆ ಹೆರಿಗೆ ಆಗಿದೆ ಎಂದು ವೀರಾಂಗಣ ಝಲ್ಕರಿ ಬಾಯಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇದೀಗ ಆಸ್ಪತ್ರೆಯು ಮಹಿಳೆಯರನ್ನೇ ದೂರುತ್ತಿದೆ. ಆಕೆಗೆ ನೋವು ಅತಿಯಾದಾಗ ಮಹಿಳೆ ಆ್ಯಂಬುಲೆನ್ಸ್ ಗೆ ಕರೆ ಮಾಡುವ ಬದಲು ರಿಕ್ಷಾದಲ್ಲಿ ಹೋಗಲು ಮುಂದಾಗಿದ್ದಳು. ಅದರಿಂದ ಹೀಗಾಗಿದೆ. ರಾಜಭವನ ಬಳಿ ಸಾರ್ವಜನಿಕರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು, ಕೇವಲ 25 ನಿಮಿಷದಲ್ಲಿ ಆ್ಯಂಬುಲೆನ್ಸ್ ಬಂದಿತ್ತು ಎಂದು ಇದೀಗ ಅಲ್ಲಿನ ಉಪಮುಖ್ಯಮಂತ್ರಿ ಹೇಳಿದ್ದಾರೆ. ಏನೇ ಇರಲಿ, ಮಾರ್ಗ ಮಧ್ಯೆ ಅದೂ ರಾಜಭವನದ ಎದುರೇ ಮಹಿಳೆಗೆ ಹೆರಿಗೆ ಆಗಿ ಇದೀಗ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ಉಂಟಾಗಿದೆ.
ಇದನ್ನೂ ಓದಿ: ದೈವಿಕ ಕೆಲಸ ಕಾರ್ಯಕಗಳ ಪುಣ್ಯ ಲಭಿಸಲಿದೆ ಇಂದು ಈ ರಾಶಿಯವರಿಗೆ!
