Home » RSS: ಅಯೋಧ್ಯೆಯಲ್ಲಿ ಮಾಡಿದಂತೆ ಮಥುರಾ ವಿಷಯದಲ್ಲಿ ನಾವು ಏನೂ ಮಾಡಲ್ಲ !! ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿಯಿಂದ ಅಚ್ಚರಿ ಹೇಳಿಕೆ

RSS: ಅಯೋಧ್ಯೆಯಲ್ಲಿ ಮಾಡಿದಂತೆ ಮಥುರಾ ವಿಷಯದಲ್ಲಿ ನಾವು ಏನೂ ಮಾಡಲ್ಲ !! ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿಯಿಂದ ಅಚ್ಚರಿ ಹೇಳಿಕೆ

0 comments

RSS: ಅಯೋಧ್ಯೆಯಲ್ಲಿ(Ayodhya) ಮಾಡಿದಂತೆ ಮಥುರಾ(Mathura) ವಿಷಯದಲ್ಲಿ ನಾವು ಏನೂ ಮಾಡಲ್ಲ. ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಹೇಳಿದ್ದಾರೆ.

ಎರಡು ದಿನಗಳ ರಾ‍ಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ‘ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಬಗ್ಗೆ ಮಾತನಾಡಿ, ಸದ್ಯ ಈ ಸಮಸ್ಯೆ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು, ನ್ಯಾಯಾಲಯ ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಿದೆ ಎಂದು ಭಾವಿಸುತ್ತೇವೆ. ಈ ವಿಚಾರದಲ್ಲಿ ಅಯೋಧ್ಯೆಯಂತೆ ಏನೂ ಮಾಡುವ ಅಗತ್ಯವಿಲ್ಲ. ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇರಬೇಕು’ ಎಂದು ಹೇಳಿದರು.

You may also like

Leave a Comment