Home » School holiday: ರಾಮ ಮಂದಿರ ಉದ್ಘಾಟನೆ ದಿನ ಶಾಲಾ-ಕಾಲೇಜುಗಳಿಗೆ ರಜೆ ಉಂಟಾ, ಇಲ್ವಾ?!!

School holiday: ರಾಮ ಮಂದಿರ ಉದ್ಘಾಟನೆ ದಿನ ಶಾಲಾ-ಕಾಲೇಜುಗಳಿಗೆ ರಜೆ ಉಂಟಾ, ಇಲ್ವಾ?!!

0 comments

 

School holiday: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಹೀಗಾಗಿ ಈ ದಿನ ಶಾಲಾ-ಕಾಲೇಜುಗಳಿಗೆ ರಜೆ(School holiday)ಇದೆಯೋ? ಇಲ್ಲವೋ? ಎಂಬ ಗೊಂದಲವೊಂದು ಶುರುವಾಗಿದೆ.

ಹೌದು, ಜನವರಿ 22ರಂದು ಅಯೋಧ್ಯೆಯಲ್ಲಿ(Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಾಗೂ ಮಂದಿರದ ಉದ್ಘಾಟನೆಯಾಗುವ ದಿನ ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಬೇಕೆಂದು ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಜೆಡಿಎಸ್ ಶಾಸಕರಾದ ಶರಣಗೌಡ ಕಂದಕೂರ ಅವರು ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ(CM Siddaramaiah)ಅವರು, ರಾಮ ಮಂದಿರ ಉದ್ಘಾಟನೆ ದಿನ ಪ್ರಧಾನಿ ಮೋದಿಯವರು ದೇಶಾದ್ಯಂತ ಸಾರ್ವಜನಿಕ ರಜೆ ಘೋಷಿಸಲಿ ಎಂದು ಆಗ್ರಹ ಮಾಡಿದ್ದರು. ಆದರೆ ಇದುವರೆಗೂ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ರಜೆ ನೀಡುವ ಕುರಿತು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಹೀಗಾಗಿ ಸರ್ಕಾರ ರಜೆ ನೀಡುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.

You may also like

Leave a Comment