Andhra Pradesh: ಅತಿಯಾಗಿ ಮದ್ಯಪಾನ ಮಾಡಿದರೆ ಅದರ ನಶೆಯಲ್ಲಿ ಹೇಳಿದ್ದು, ಮಾಡಿದ್ದು ಯಾವುದೂ ನೆನಪಿರಲ್ಲ. ಹಾಗೆಯೇ ಇಲ್ಲೊಬ್ಬ ಕುಡಿದು ಮನೆಗೆ ಬಂದು ಕುಡಿದ ನಶೆಯಲ್ಲಿಯೇ ಪತ್ನಿಯ ತುಟಿಗೆ ಚುಂಬಿಸಿದ್ದಾನೆ. ಮುಂದೆ ಹೆಂಡ್ತಿ ಮಾಡಿದ್ದನ್ನು ಆತ ಜೀವನ ಪೂರ್ತಿ ಹೇಳಲಾರ. ಅಷ್ಟಕ್ಕೂ ಏನಾಗಿತ್ತು ?!
ವ್ಯಕ್ತಿ ಮದ್ಯಪಾನ ಮಾಡಿ ಕುಡಿದ ನಶೆಯಲ್ಲಿ ಪತ್ನಿಗೆ ಚುಂಬಿಸಿದ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್ನಲ್ಲಿ ನಡೆದಿದೆ. ದಂಪತಿಗಳು ಮದ್ಯಪಾನ ಮಾಡುತ್ತಿದ್ದರು. ನಶೆಯಲ್ಲಿ ಇಬ್ಬರೂ ರೋಮ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕುಡಿದ ನಶೆಯಲ್ಲಿ ಪತಿ ಪತ್ನಿಗೆ ಚುಂಬಿಸಿದ್ದಾನೆ. ಮುಂದೆನಾಯ್ತು ಗೊತ್ತಾ?!
ಪತಿ ತನ್ನ ಪತ್ನಿಗೆ ಚುಂಬಿಸಲು ಮುಂದಾದಾಗ ಆತ ವಿಪರೀತ ಕುಡಿದು ವಾಸನೆ ಹೊಡೆಯುತ್ತಿದ್ದರಿಂದ ಪತ್ನಿ ಆತನ ಚುಂಬನವನ್ನು ವಿರೋಧಿಸಿದ್ದಾಳೆ. ಆದರೆ, ಆಕೆಯ ಮಾತನ್ನು ಕೇಳದ ಪತಿ ಪತ್ನಿಯನ್ನು ಬಲವಂತವಾಗಿ ಚುಂಬಿಸಿದ್ದಾನೆ.
ಇದರಿಂದ ತೀವ್ರ ಕೋಪಗೊಂಡ ಹೆಂಡತಿ ಪತಿಯ ನಾಲಿಗೆಯನ್ನು ರಕ್ತ ಹರಿಯುವವರೆಗೂ ಕಚ್ಚಿದ್ದಾಳೆ. ಆತನ ನಾಲಿಗೆ ತುಂಡರಿಸುವ ಹಂತಕ್ಕೆ ಬರುವವರೆಗೂ ಕಚ್ಚಿ ಹಾಕಿದ್ದಳು. ನಾಲಿಗೆಯಿಂದ ರಕ್ತ ಸೋರುತ್ತಿತ್ತು. ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
