Home » Kerala Lottery : 80 ಲಕ್ಷದ ಲಾಟರಿ ತಂದ ದುರಂತ, ಬಹುಮಾನ ಗೆದ್ದ ಯುವಕನ ಬದುಕು ಕೊಲೆಯಲ್ಲಿ ಅಂತ್ಯ!

Kerala Lottery : 80 ಲಕ್ಷದ ಲಾಟರಿ ತಂದ ದುರಂತ, ಬಹುಮಾನ ಗೆದ್ದ ಯುವಕನ ಬದುಕು ಕೊಲೆಯಲ್ಲಿ ಅಂತ್ಯ!

by ಹೊಸಕನ್ನಡ
1 comment
Kerala Lottery

Kerala Lottery  : ಲಾಟರಿ(Lottery) ಒಬ್ಬ ಮನುಷ್ಯನನ್ನು ಹಾಳುಮಾಡುವುದಲ್ಲದೆ ಆತನ ಇಡೀ ಸಂಸಾರವನ್ನೇ ಸರ್ವನಾಶ ಮಾಡಿಬಿಡುತ್ತದೆ. ಈ ನಿಟ್ಟಿನಲ್ಲಿ ಕೆಲವು ರಾಜ್ಯಗಳು ಈಗಾಗಲೇ ಈ ಲಾಟರಿ ವ್ಯವಹಾರವನ್ನು ರದ್ಧುಮಾಡಿದರೆ ಕೆಲವು ರಾಜ್ಯಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ವಿಶೇಷವೆಂದರೆ ಸರ್ಕಾರವೇ ಇದನ್ನು ನಡೆಸುತ್ತದೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಈ ಲಾಟರಿ ವಿಚಾರ ಭಾರೀ ಚಾಲ್ತಿಯಲ್ಲಿದೆ. ಲಕ್ಷಗಟ್ಟಲೆ, ಕೋಟಿ ಗಟ್ಟಲೆ ಲಾಟರಿ ಹೊಡೆದವರನ್ನೂ ನೋಡುತ್ತಿದ್ದೇವೆ. ಆದರೆ ಇಲ್ಲೊಂದೆಡೆ ಈ ಲಾಟರಿ ದುಡ್ಡು ಒಬ್ಬ ಅಮಾಯಕನ ಜೀವನ ಪಡೆದಿದೆ.

ಹೌದು, ಕೇರಳದ(Kerala Lottery ) ಪಾಂಗೋಡೆ ಮೂಲದ ಸಜೀವ್​(Sajeev) (35) ಎಂಬಾತ ಲಾಟರಿಯಲ್ಲಿ 80 ಲಕ್ಷ ರೂಗಳನ್ನು ಬಹುಮಾನವಾಗಿ ಪಡೆದಿದ್ದಾನೆ. ಆದರೆ ಲಾಟರಿ ಹೊಡೆದ ಮಾರನೇ ದಿನವೇ ಯುವಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸ್ನೇಹಿತರ ಜತೆ ಸೇರಿ ಮದ್ಯದ ಪಾರ್ಟಿ ನಡೆಸುತ್ತಿದ್ದಾಗ ಮಣ್ಣಿನ ದಿಬ್ಬದಿಂದ ಬಿದ್ದು ಮೃತಪಟ್ಟಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಂದಹಾಗೆ ಪೊಲೀಸರ ಪ್ರಕಾರ, ಸಾವಿಗೂ ಹಿಂದಿನ ದಿನ ಸಜೀವ್ 80 ಲಕ್ಷ ರೂಪಾಯಿ ಲಾಟರಿ ಗೆದ್ದಿದ್ದರು. ಮರುದಿನ ಅವರ ಖಾತೆಗೆ ಹಣ ಬಂದಿದೆ. ಇದರ ಬೆನ್ನಲ್ಲೇ ಏಪ್ರಿಲ್​ 1ರಂದು ರಾತ್ರಿ ಪಾಂಗೋಡೆಯ ಚಂತಕ್ಕುನ್ನುನಲ್ಲಿರುವ ತನ್ನ ಸ್ನೇಹಿತನ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತರಿಗಾಗಿ ಮದ್ಯದ ಪಾರ್ಟಿ ಏರ್ಪಡಿಸಿದ್ದ. ಈ ವೇಳೆ ಆತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಪಾರ್ಟಿ ಮಾಡಿದ ಜಾಗದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರೀತಿಯಲ್ಲೆ ಸಜೀವ್​ ಪತ್ತೆಯಾಗಿದ್ದಾನೆ. ಬಳಿಕ ಆತನನ್ನು ಪಂಗೋಡೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಅಲ್ಲದೆ ಸಜೀವ್​ನನ್ನು ಆತನ ಸ್ನೇಹಿತ ಸಂತೋಷ್ ಅಲಿಯಾಸ್​ ಮಾಯಾವಿ ಮಣ್ಣಿನ ದಿಬ್ಬದಿಂದ ಕೆಳಗೆ ತಳ್ಳಿದ್ದ ಎನ್ನಲಾಗಿದೆ. ಈ ಸಂಬಂಧ ಪಂಗೋಡೆ. ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment