Home » ಉಡುಪಿ: ನಿಶ್ಚಿತಾರ್ಥಕ್ಕೆ ತೆರಳಿದ್ದ ಮಂಗಳೂರಿನ ತಾಯಿ ಮಗಳು ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು -ಪತ್ತೆಗೆ ಮನವಿ

ಉಡುಪಿ: ನಿಶ್ಚಿತಾರ್ಥಕ್ಕೆ ತೆರಳಿದ್ದ ಮಂಗಳೂರಿನ ತಾಯಿ ಮಗಳು ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು -ಪತ್ತೆಗೆ ಮನವಿ

0 comments

ನಿಶ್ಚಿತಾರ್ಥಕ್ಕೆಂದು ಮಂಗಳೂರಿನಿಂದ ಉಡುಪಿಯ ಬ್ರಹ್ಮಾವರಕ್ಕೆ ತೆರಳಿದ್ದ ತಾಯಿ ಮಗಳು ನಾಪತ್ತೆಯಾದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಮಂಗಳೂರು ಹೊರವಲಯದ ಉಳ್ಳಾಲ ಬಂಡ್ಯಕೊಟ್ಯ ನಿವಾಸಿ ಪೃಥ್ವಿನಿ(32) ಹಾಗೂ ಅವರ ಮಗಳು ಪುನರ್ವಿ(04) ಎಂದು ಗುರುತಿಸಲಾಗಿದೆ.

ಪೃಥ್ವಿನಿಯವರು ಕಳೆದ ಮೇ 13ರಂದು ಉಳ್ಳಾಲದ ತನ್ನ ಮನೆಯಿಂದ ಉಡುಪಿ ಬ್ರಹ್ಮಾವರದ ಹೇರೂರಿನಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ನಡೆಯುವ ನಿಶ್ಚಿತಾರ್ಥ ಕಾರ್ಯಕ್ಕೆ ಮಗಳೊಂದಿಗೆ ತೆರಳಿದ್ದರು. ಆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ, ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ತೆಗೆ ಸಹಕರಿಸಲು ಕೋರಲಾಗಿದೆ.

You may also like

Leave a Comment