Home » ಉಡುಪಿ : ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ಹೋದ ಯುವಕ ಸಮುದ್ರಪಾಲು|

ಉಡುಪಿ : ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ಹೋದ ಯುವಕ ಸಮುದ್ರಪಾಲು|

0 comments

ಉಡುಪಿ : ಸಮುದ್ರದಲ್ಲಿ ಈಜಲೆಂದು ತೆರಳಿದ್ದ ಯವಕನೋರ್ವ ಶವವಾಗಿ ಪತ್ತೆಯಾದ ಘಟನೆ ಕುಂದಾಪುರದ ಬೈಂದೂರಿನಲ್ಲಿ ನಡೆದಿದೆ.

ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರುಪಾಲಾಗಿದ್ದಾನೆ. ಈ ಘಟನೆ ಕುಂದಾಪುರದ ಬೈಂದೂರಿನಲ್ಲಿರುವ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.

ಬೈಂದೂರು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ ( 23) ನೀರುಪಾಲಾಗಿ ಮೃತಪಟ್ಟ ಯುವಕ. ಘಟನೆಯಲ್ಲಿ ಮೃತ ಶಶಿಧರ್ ದೇವಾಡಿಗನ ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment