Home » ಉಡುಪಿ :ಬಾಲಕಿಯ ಮೇಲೆ ಸಂಬಂಧಿಕ ಯುವಕರಿಂದ ಲೈಂಗಿಕ ದೌರ್ಜನ್ಯ ,ಆರೋಪಿಗಳ ಬಂಧನ

ಉಡುಪಿ :ಬಾಲಕಿಯ ಮೇಲೆ ಸಂಬಂಧಿಕ ಯುವಕರಿಂದ ಲೈಂಗಿಕ ದೌರ್ಜನ್ಯ ,ಆರೋಪಿಗಳ ಬಂಧನ

by Praveen Chennavara
0 comments

ಉಡುಪಿ : ಎಂಟು ವರ್ಷದ ಬಾಲಕಿಯ ಮೇಲೆ ಇಬ್ಬರು ಸಂಬಂಧಿಕರು ನಿರಂತರವಾಗಿ ಎರಡು ತಿಂಗಳು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು,ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿಗಳಾದ ಸಂದೀಪ್ ನಾಯ್ಕ ಹಾಗೂ ವಿಜೇಶ್ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂದೀಪ್ ನಾಯ್ಕ ವಿವಾಹಿತ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಮತ್ತೊಂದು ಆರೋಪಿಯೂ ಸಣ್ಣಪಟ್ಟ ಕೆಲಸಗಳನ್ನು ಸ್ಥಳೀಯವಾಗಿ ಮಾಡುತ್ತಿದ್ದ ಈ ಇಬ್ಬರೂ ಆರೋಪಿಗಳ ಮೇಲೆ ಈ ಹಿಂದೆಯೂ ಆರೋಪ ಸ್ಥಳೀಯವಾಗಿ ಕೇಳಿಬಂದಿತ್ತು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆಂದು ಮನೆಯಿಂದ ಬೆಳಿಗ್ಗೆ ಹೋಗಿ ರಾತ್ರಿ ಮರಳುತ್ತಿದ್ದರು.

ತಂದೆ-ತಾಯಿ ಇಲ್ಲದ ವೇಳೆಯಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಸಮಯದಲ್ಲಿ ಆರೋಪಿತ ಸಂಬಂಧಿತ ಯುವಕರಾದ ಸಂದೀಪ್,ವಿಘ್ನೇಶ್ ಅವರು ಬಾಲಕಿಯಲ್ಲಿ ತಂದೆ, ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿ ನಿರಂತರ ದೌರ್ಜನ್ಯ ಮಾಡಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

You may also like

Leave a Comment