Home » ಉಡುಪಿ: ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು | ಮತಾಂತರವೆಂಬ ಪೀಡೆಗೆ ಬಲಿಯಾದರೆ ಮಹಿಳೆ ??

ಉಡುಪಿ: ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು | ಮತಾಂತರವೆಂಬ ಪೀಡೆಗೆ ಬಲಿಯಾದರೆ ಮಹಿಳೆ ??

0 comments

ಉಡುಪಿ: ಮಹಿಳೆಯೋರ್ವರ ಆತ್ಮಹತ್ಯೆ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಮತಾಂತರದ ಪೀಡೆಗೆ ಮಹಿಳೆ ಬಲಿಯಾದರೇ?? ಎನ್ನುವ ಅನುಮಾನ ಹುಟ್ಟಿದೆ.

ಮಣಿಪಾಲದ ನೇತಾಜಿ ನಗರದ ಜಯಲಕ್ಷ್ಮೀ(35) ಎಂಬ ಮಹಿಳೆ ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾಥಮಿಕ ವರದಿ ಪ್ರಕಾರ ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.

ಆದರೆ ಇದೀಗ ಸಾಯುವ ಮುನ್ನ ಮಹಿಳೆ ಹಿಂದೂ ಜಾಗರಣೆ ವೇದಿಕೆಯ ಮುಖಂಡರ ಜೊತೆ ಮಾತನಾಡಿರುವ ಆಡಿಯೋ ಒಂದು ಬಹಿರಂಗಗೊಂಡಿದ್ದು, ಆ ಆಡಿಯೋದಲ್ಲಿ ತನ್ನ ಗಂಡ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪದೇ ಪದೇ ಪೀಡಿಸುತ್ತಿದ್ದ ಎನ್ನುವ ಆರೋಪವನ್ನು ಮಾಡಿದ್ದಾರೆ. ಅದಲ್ಲದೆ ನನಗೆ ಈ ಜೀವನ ಸಾಕು, ನಾನು ದೂರ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಆಡಿಯೋ ತುಣುಕು ಇದೀಗ ಮತಾಂತರದ ಕುರಿತು ಅನುಮಾನ ಹುಟ್ಟಿಸಿದೆ. ಅವರ ಸಾವಿಗೆ ಪರೋಕ್ಷವಾಗಿ ಪತಿಯೇ ಕಾರಣನಾದನೇ ಎಂಬ ಗುಮಾನಿ ಎದ್ದಿದೆ. ಸದ್ಯ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

You may also like

Leave a Comment