Home » ಬ್ಯಾಂಕ್ ದರೋಡೆಗೆ ಬಂದು ಸಿಕ್ಕಿಬಿದ್ದ ಕಳ್ಳ ಮದುಮಗ | ಹಸೆಮಣೆ ಏರಬೇಕಾದವ ಸೆರೆಮನೆಗೆ

ಬ್ಯಾಂಕ್ ದರೋಡೆಗೆ ಬಂದು ಸಿಕ್ಕಿಬಿದ್ದ ಕಳ್ಳ ಮದುಮಗ | ಹಸೆಮಣೆ ಏರಬೇಕಾದವ ಸೆರೆಮನೆಗೆ

by Praveen Chennavara
0 comments

ಮದುವೆಗೆ ಇನ್ನೆರಡು ದಿನವಷ್ಟೇ ಬಾಕಿ ಇತ್ತು. ಆದರೂ ತನ್ನ ಕೈಚಳಕ ತೋರಲು ಮುಂದಾಗಿದ್ದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಹಸೆಮಣೆ ಏರಬೇಕಿದ್ದ ಮದುಮಗ ಈಗ ಕಂಬಿ ಎಣಿಸುತ್ತಿದ್ದಾನೆ.

ಹೌದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಮತ್ತು ನಾಗರಿಕರು ಹಿಡಿದಿದ್ದಾರೆ. ವಿಜಯಪುರದ ಪ್ರವೀಣಕುಮಾರ್‌ ಅಪ್ಪಾಸಾಹೇಬ್ ಪಾಟೀಲ ಬಂಧಿತ ಆರೋಪಿ.

ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಕಳೆದ ಎರಡು ದಿನಗಳ ಹಿಂದೆ ಹುಬ್ಬಳಿಗೆ ಬಂದು ಭಾರತಿ ಲಾಡ್ಜ್‌ನಲ್ಲಿ ತಂಗಿದ್ದ. ಇಂದು ಕೊಪ್ಪಿಕರ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿಗೆ ನುಗ್ಗಿ ಕ್ಯಾಷಿಯರ್‌ಗೆ ಚಾಕು ತೋರಿಸಿ, ಬ್ಯಾಗಿನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣವನ್ನು ಹಾಕಿಸಿದ್ದಾನೆ.

ತಕ್ಷಣವೇ ಪರಾರಿಯಾಗಲು ಯತ್ನಿಸಿದಾಗ, ಬ್ಯಾಂಕಿನ ಮಹಿಳಾ ಸಿಬ್ಬಂದಿ ಕೂಗಿಕೊಂಡಿದ್ದಾರೆ. ಕೂಡಲೇ ಬ್ಯಾಂಕಿನ ಬಳಿ ಕರ್ತವ್ಯನಿರತ ಸಂಚಾರಿ ಠಾಣೆಯ ಪೊಲೀಸ್ ಉಮೇಶ ಹಾಗೂ ಉಪನಗರ ಠಾಣೆಯ ಪೇದೆಯೊಬ್ಬರು ಆರೋಪಿಯನ್ನು ಹಣದ ಸಮೇತ ಹಿಡಿದಿದ್ದಾರೆ.

You may also like

Leave a Comment